ಗುಂಪು ಹತ್ಯೆ ತಡೆಯಲು ಸೆಲೆಬ್ರಿಟಿಗಳಿಂದ ಪ್ರಧಾನಿಗೆ ಪತ್ರ

celebrities write open letter to PM Modi against mob lynching

24-07-2019

ದೆಹಲಿ: ಗಾಯಕಿ ಶುಭಾ ಮುದಗಲ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಒಟ್ಟು 49 ಸೆಲೆಬ್ರಿಟಿಗಳು ಗುಂಪು ಹಲ್ಲೆ ಘಟನೆಗಳನ್ನು ವಿರೋಧಿಸಿ ಮತ್ತು ಹಲ್ಲೆಕೋರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪತ್ರಕ್ಕೆ ಸಹಿ ಹಾಕಿರುವವರಲ್ಲಿ ನಟಿ ಕೊಂಕಣಾ ಸೇನ್ ಶರ್ಮಾ,, ಚಿತ್ರ ನಿರ್ಮಾಪಕ ಶಾಂ ಬೆನಗಲ್, ಅನುರಾಗ್ ಕಶ್ಯಪ್ ಮತ್ತು ಮಣಿರತ್ನಂ ಕೂಡ ಸೇರಿದ್ದಾರೆ.

ಜುಲೈ 23ರಂದು ಬರೆದಿರುವ ಪತ್ರದಲ್ಲಿ ಮುಸ್ಲಿಮರು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಗುಂಪು ಹಲ್ಲೆ ನಡೆಸಿ, ಹತ್ಯೆಗೈಯುವುದನ್ನು ತಕ್ಷಣ ನಿಲ್ಲಿಸುವಂತೆ ಅವರು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ಮಾಹಿತಿಗಳನ್ನು ನೋಡಿ ನಮಗೆ ಆಘಾತವಾಗಿದೆ. ಇದರಲ್ಲಿ ದಲಿತರ ಮೇಲೆ 2016ರಿಂದ 840 ಬಾರಿ ದೌರ್ಜನ್ಯ ಎಸಗಿರುವ ಸಂಗತಿ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಜೊತೆಗೆ, ಧಾರ್ಮಿಕ ವಿಷಯಕ್ಕೆ ಸಂಬಧಿಸಿದಂತೆ 254 ಗಲಭೆಗಳು ಜನವರಿ 1, 2009ರಿಂದ ಅಕ್ಟೋಬರ್ 2018ರವರೆಗೆ ನಡೆದಿದ್ದು, ಇದರಲ್ಲಿ ಕನಿಷ್ಠ 91 ಜನರ ಹತ್ಯೆಯಾಗಿದ್ದು, 579 ಜನ ಗಾಯಗೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತರು, ಚಿತ್ರೋದ್ಯಮದ ಗಣ್ಯರು, ಸಾಹಿತಿಗಳು ಸೇರಿದಂತೆ ಅನೇಕರು ಈ ಪತ್ರಕ್ಕೆ ಸಹಿ ಹಾಕಿದ್ದು, ಅದಿತಿ ಬಸು, ಅಡೂರ್ ಗೋಪಾಲಕೃಷ್ಣನ್, ಅಮಿತ್ ಚೌಧುರಿ, ಅಂಜನ್ ದತ್, ಅನುಪಮ್ ರಾಯ್, ಅನುರಾಧ ಕಪೂರ್, ಅಪರ್ಣಾ ಸೇನ್, ಆಶಾ ಆಚಿ ಜೋಸೆಫ್, ಆಶಿಶ್ ನಂದಿ, ಬೈಸಾಖಿ ಘೋಷ್, ವಿನಾಯಕ್ ಸೇನ್, ಬೋಲ್ ಗಂಗೋಪಾಧ್ಯಾಯ, ಬೋನಾನಿ ಕಕ್ಕರ್, ಚಿತ್ರಾ ಸಿರ್ಕರ್, ದರ್ಶನ್ ಶಾ, ದೇವಲ್ ಸೇನ್, ಗೌತಮ್ ಘೋಷ್ ಮೊದಲಾದವರು ಗುಂಪು ಹತ್ಯೆಗಳನ್ನು ಖಂಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Celebrities lynching PM Modi Open letter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ