ಜಿಗ್ನೇಶ್ ಮೆವಾನಿ ಇಟ್ಟ ಮೂರು ಸವಾಲುಗಳು !

Jignesh Mevani Statement

24-07-2019

ಅಹಮದಾಬಾದ್: ನಾನು ಗುಜರಾತ್ ಸರ್ಕಾರಕ್ಕೆ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಮೂರು ಸವಾಲುಗಳನ್ನು ಇಟ್ಟಿದ್ದೇನೆ ಎಂದು ಶಾಸಕ ಮತ್ತು ಹೋರಾಟಗಾರ ಜಿಗ್ನೇಶ್ ಮೆವಾನಿ ಟ್ವೀಟ್ ಮಾಡಿದ್ದಾರೆ. 1. ಒಂದು ವೇಳೆ ಸರ್ಕಾರ ಬಳಸಲು ಅನುಮತಿ ಕೊಟ್ಟರೆ ನಾನು ಸ್ಕ್ಯಾವೆಂಜಿಂಗ್ ಯಂತ್ರಗಳನ್ನು (ಮ್ಯಾನ್ ಹೋಲ್‍ ಅನ್ನು ಮಾನವ ರಹಿತವಾಗಿ ಸ್ವಚ್ಛಗೊಳಿಸುವ ಯಂತ್ರ) ಕೊಳ್ಳುತ್ತೇನೆ. 2. ಆಗಸ್ಟ್ 15ರ ಒಳಗೆ ಒಂದು ಅಸ್ಪೃಶ್ಯತೆ ಮುಕ್ತ ಗ್ರಾಮವನ್ನು ಘೋಷಿಸಿ. 3. ಒಂದು ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ನೀತಿಯನ್ನು ಪರಿಚಯಿಸಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜೊತೆಗೆ, ಗುಜರಾತ್ ರಾಜ್ಯ ಬಿಜೆಪಿಯನ್ನು ಅವರು ಟ್ಯಾಗ್ ಮಾಡಿದ್ದು, ತಮ್ಮ ಸವಾಲುಗಳ ಕುರಿತು ರಾಜ್ಯ ಬಿಜೆಪಿ ಮೌನವಾಗಿದೆ ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Jignesh Mevani MLA Gujarath Challenge


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ