ಮಂತ್ರಿಮಂಡಲ ರಚನೆ ಕಸರತ್ತು – ನಡೆದಿದೆ ಬಾರಿ ಲೆಕ್ಕಾಚಾರ!

BJP Government

24-07-2019

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರುವ ಬೆನ್ನಲ್ಲೇ ಎಷ್ಟು ಜನ ಉಪಮುಖ್ಯಮಂತ್ರಿಗಳು ಇರುತ್ತಾರೆ, ಯಾರಿಗೆ ಸಚಿವ ಸ್ಥಾನ, ಯಾರು ತ್ಯಾಗರಾಜರಾಗಬೇಕೆಂಬ ಚರ್ಚೆ ಶುರುವಾಗಿದೆ. ಈ ಹಿಂದೆ ಜಾತಿ, ಪ್ರದೇಶ ಮತ್ತು ಹಿರಿತನದ ಲೆಕ್ಕಾಚಾರದಲ್ಲಿ ಆರ್ ಅಶೋಕ್ ಮತ್ತು ಕೆ.ಎಸ್ ಈಶ್ವರಪ್ಪ ಇಬ್ಬರೂ ಡಿಸಿಎಂಗಳಾಗಿದ್ದರು. ಆದರೆ ಈ ಬಾರಿ ಇವರಿಗೆ ಇಂತಹ ಹುದ್ದೆ ಸಿಗುವುದಿರಲಿ ಮಂತ್ರಿ ಸ್ಥಾನವೂ ಸಿಗುವುದು ಕಷ್ಟ ಎನ್ನಲಾಗುತ್ತಿದೆ.

ಇದಕ್ಕೆ ಕಾರಣವಿಷ್ಟೆ ಮೈತ್ರಿ ಸರ್ಕಾರವನ್ನ ಉರುಳಿಸುವಲ್ಲಿ ಮುಂಚೂಣಿಯಲ್ಲಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ , ಜೆಡಿಎಸ್ ಅಧ್ಯಕ್ಷರಾಗಿದ್ದ ಎಚ್ ವಿಶ್ವನಾಥ್ ಮತ್ತು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಅಶೋಕ್ ಮತ್ತು ‌ಈಶ್ವರಪ್ಪ ಅವರಿಗೆ ಈ ಬಾರಿ ಡಿ.ಸಿ.ಎಂ.ಪಟ್ಟ ಲಭಿಸದು ಎನ್ನಲಾಗಿದೆ.

ಇನ್ನೂ ‌ಮಂತ್ರಿ ಸ್ಥಾನಕ್ಕೆ ಹಲವರು ಲಾಭಿ ನಡೆಸುತ್ತಿದ್ದಾರೆ ಆದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸೇರುತ್ತಿರುವ ಬಹುತೇಕ ಎಲ್ಲರಿಗೂ ಮಂತ್ರಿ ಸ್ಥಾನದ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ‌ಮೂಲ ಬಿಜೆಪಿಯ ಅನೇಕರು ತ್ಯಾಗರಾಜರಾಗಬೇಕು ಎನ್ನಲಾಗಿದೆ.

ಮೂಲಗಳ ಪ್ರಕಾರ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅಂಗಾರ, ಮಾಧುಸ್ವಾಮಿ ಬಸವರಾಜ ಬೊಮ್ಮಾಯಿ ಅರವಿಂದ ಲಿಂಬಾವಳಿ ಮೊದಲ ಹಂತದಲ್ಲಿ ಮಂತ್ರಿ ಗಳಾಗಲಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Cabinet Minister BJP Government DCM


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ