ಕಾಶ್ಮೀರ ಪರಿಹಾರ ಮಧ್ಯಸ್ಥಿಕೆ ವಿವಾದ: ಲೋಕಸಭೆಯಲ್ಲಿ ಕೋಲಾಹಲ

Uproar in Parliament over Donald Trump’s remarks on Kashmir mediation

24-07-2019

ದೆಹಲಿ: ಕಾಶ್ಮೀರ ಸಮಸ್ಯೆಯ ಪರಿಹಾರ ವಿಷಯದಲ್ಲಿ ಮಧ್ಯಪ್ರವೇಶಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಇಂದು ಕೂಡ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆಯೇ ಎಂಬ ಕುರಿತು ಸ್ವತಃ ಮೋದಿಯವರೇ ಪ್ರತಿಕ್ರಿಯೆ ನೀಡಬೇಕು ಎಂದು ವಿಪಕ್ಷಗಳು ಗದ್ದಲ ನಡೆಸಿದವು. ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಇನ್ನಿತರರು ಈ ವಿಷಯದ ಕುರಿತು ಚರ್ಚೆ ನಡೆಸಬೇಕು ಎಂದು ಸ್ಪೀಕರ್‍ಗೆ ನೊಟೀಸ್ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಗದ್ದಲ ನಡೆಯಿತು.


ಸಂಬಂಧಿತ ಟ್ಯಾಗ್ಗಳು

Kashir Lokasabhe Donald Trump Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ