ಕೋಟ್ಯಾಂತರ ರುಪಾಯಿ ಮೌಲ್ಯದ 1,454 ಕೆಜಿ ರಕ್ತಚಂದನ ಪೊಲೀಸರ ವಶಕ್ಕೆ

Rose wood seized in Bengaluru rural district

22-07-2019

ಬೆಂಗಳೂರು: ಮನೆಯಲ್ಲಿ ಸುರಂಗ ಕೊರೆದು ಬಚ್ಚಿಟ್ಟಿದ್ದ ಕೋಟ್ಯಾಂತರ ರುಪಾಯಿ ಮೌಲ್ಯದ 1,454 ಕೆಜಿ ರಕ್ತಚಂದನವನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತಂದೆ ಹಾಗು ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.

ಕಟ್ಟಿಗೇನಹಳ್ಳಿಯ ಮಜೀದ್ ಹಾಗೂ ಆತನ ಮಕ್ಕಳಾದ ಬಷೀರ್ ಮೊಹಮ್ಮದ್ ಬಂಧಿತ ಆರೋಪಿಗಳಾಗಿದ್ದಾರೆ ಮನೆಯೊಂದರಲ್ಲಿ ಸುರಂಗ ಮಾರ್ಗ ನಿರ್ಮಿಸಿ, ಅದರಲ್ಲಿ ರಕ್ತಚಂದನವನ್ನು ಬಚ್ಚಿಟ್ಟಿದ್ದರು. ಬಂಧಿತರಿಂದ  1,454 ಕೆಜಿ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿದೆ.

ಆಂಧ್ರದಿಂದ ಕಳ್ಳಸಾಗಾಣೆ ಮಾಡಿಕೊಂಡು ಬಂದು ಮನೆಯಲ್ಲಿ ಸುರಂಗ ಕೊರೆದು ಆರೋಪಿಗಳನ್ನು ರಕ್ತ ಚಂದನವನ್ನು ಬಚ್ಚಿಟ್ಟಿದ್ದು ಅದರ ಮೌಲ್ಯದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಗಳಾಗಿದೆ.

ಕಟ್ಟಿಗೇನಹಳ್ಳಿ ಗ್ರಾಮದ ಮನೆಯಲ್ಲಿ ರಕ್ತಚಂದನವನ್ನು ಬಚ್ಚಿಟ್ಟಿದ್ದ ಖಚಿತ ಮಾಹಿತಿ ಬೆಂಗಳೂರು ಗ್ರಾಮಾಂತರ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣವೇ ವಿಶೇಷ ಕಾರ್ಯಚರಣೆ ನಡೆಸಿದ ಪೊಲೀಸರು ಮನೆಗೆ ಭೇಟಿ ನೀಡಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ರಕ್ತಚಂದನ ಪತ್ತೆಯಾಗಿರಲಿಲ್ಲ. ಹೀಗಾಗಿ ಮಜೀದ್ ಹಾಗೂ ಬಷೀರ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ರಕ್ತಚಂದನ ಬಚ್ಚಿಟ್ಟಿದ್ದ ಜಾಗವನ್ನು ಬಾಯಿಬಿಟ್ಟಿದ್ದಾರೆ.

ಆರೋಪಿ ಬಷೀರ್ ಮೇಲೆ ಆಂಧ್ರಪ್ರದೇಶದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಕಾರ್ಯಾಚರಣೆ ನಡೆಸಿರುವ ಹೊಸಕೋಟೆ ಪೊಲೀಸರು ತಿಳಿಸಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

Rosewood Smuggling Bengaluru Rural Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ