ಕುಖ್ಯಾತ ರೌಡಿ ಅನಿಲ್ ಅಲಿಯಾಸ್ ಚಂಡಾಲ ಸೆರೆ

Rowdy Anil arrested after a gun shot

22-07-2019

ಬೆಂಗಳೂರು,ಜು.22-.ಕೊಲೆ,ಕೊಲೆಯತ್ನ,ಸುಲಿಗೆ,ಬೆದರಿಕೆ ಇನ್ನಿತರ 15 ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಅನಿಲ್ ಅಲಿಯಾಸ್ ಚಂಡಾಲನಿಗೆ ಚಾಮರಾಜಪೇಟೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಎಡಗಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ಚಾಮರಾಜಪೇಟೆಯ ರೌಡಿ ಅನಿಲ್(38)ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಬಂಧಿಸಲು ಬೆನ್ನಟ್ಟಿ ಹೋದ ಚಾಮರಾಜಪೇಟೆ ಪೊಲೀಸ್ ಠಾಣೆ ಪೇದೆ ಚಂದ್ರಶೇಖರ್ ಪಾಟೀಲ್‍ಗೆ ರೌಡಿ ಚಂಡಾಲ ಡ್ರಾಗರ್‍ನಿಂದ ಇರಿದಿದ್ದು ಗಾಯಗೊಂಡ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಕೊಲೆ,ಕೊಲೆಯತ್ನ,ಸುಲಿಗೆ,ಬೆದರಿಕೆ ಇನ್ನಿತರ 15 ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಚಂಡಾಲ ಚಾಮರಾಜಪೇಟೆ ಹಾಗೂ ಕಾಟನ್‍ಪೇಟೆ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.

ಕೊಲೆಯತ್ನ ಕೃತ್ಯವೊಂದರಲ್ಲಿ ಭಾಗಿಯಾಗಿದ್ದ ರೌಡಿ ಚಂಡಾಳನ ಮೇಲೆ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು ಅದನ್ನು ಲೆಕ್ಕಿಸದೇ ತಲೆಮರೆಸಿಕೊಂಡು ಅಪರಾಧ ಕೃತ್ಯದಲ್ಲಿ ತೊಡಗಿದ್ದು ಆತನ ಬಂಧನಕ್ಕೆ ಚಾಮರಾಜಪೇಟೆ ಪೊಲೀಸರು ತೀವ್ರ ಶೋಧ ನಡೆಸಿದ್ದರು.

ಕಾಟನ್ ಪೇಟೆಯ ವೆಟರ್ನರಿ ಆಸ್ಪತ್ರೆ ಬಳಿ ನಿನ್ನೆ ರಾತ್ರಿ 12.30ರ ವೇಳೆ ಅಡಗಿರುವ ಖಚಿತ ಮಾಹಿತಿ ಆಧರಿಸಿ ಚಾಮರಾಜಪೇಟೆ ಪೊಲೀಸ್ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಅವರು ಸಿಬ್ಬಂದಿಯೊಂದಿಗೆ ಬಂಧಿಸಲು ಹೋಗಿದ್ದರು ಪೊಲೀಸರ ವಾಹನ ನೋಡಿದ ಚಂಡಾಲ ಓಡ ತೊಡಗಿದ್ದು ಆತನನ್ನ ಬೆನ್ನಟ್ಟಿ ಹೋದ ಪೇದೆ ಚಂದ್ರಶೇಖರ್ ಪಾಟೀಲ್‍ಗೆ ಹಿಡಿದು ಬಂಧಿಸಲು ಮುಂದಾಗಿದ್ದಾರೆ.

ಅವರಿಂದ ತಪ್ಪಿಸಿಕೊಳ್ಳಲು ಡ್ರಾಗರ್‍ನಿಂದ ಕೈಗೆ ಇರಿದಿದ್ದಾನೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಕುಮಾರಸ್ವಾಮಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆ ನಡೆಸಿ ಪರಾರಿಯಾಗಲು ಓಡಿ ತೊಡಗಿದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದಾರೆ.

ಅದು ಎಡಗಾಲಿಗೆ ತಗುಲಿ ಚಂಡಾಲ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಆತನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

Rowdy Anil Rowdy Chandala Crime Bengaluru police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ