ವಿದ್ಯುತ್ ತಂತಿ ತಗುಲಿ ಬಾಲಕಿಯೊಬ್ಬಳಿಗೆ ಗಂಭೀರವಾಗಿ ಗಾಯ

A girl hospitalized for an Electric Accidents

22-07-2019

ಬೆಂಗಳೂರು: ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಹೊಸಕೋಟೆಯ ಲಿಂಗಾಪುರದಲ್ಲಿ ನಡೆದಿದೆ.

ಗಾಯಗೊಂಡಿರುವ ಲಿಂಗಾಪುರದ ಬಾಲಕಿ ಕೌಸಲ್ಯಾ (12)ಳನ್ನು  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಸಾವು-ಬದುಕಿನ ನಡುವೆ ಹೋರಾಟ ನಡಿಸಿದ್ದಾಳೆ.

ಬಾಲಕಿ ಕೌಸಲ್ಯಾಗೆ ಮನೆಯ ಮೇಲೆ ಹಾದು ಹೋಗಿದ್ದ 11 ಕೆ.ವಿ ವಿದ್ಯುತ್ ತಂತಿ ತಗುಲಿದ್ದು ಆಕೆಯ ಬಲಗೈನ ಬೆರಳುಗಳು ಕತ್ತರಿಸಿ ದೇಹದ ಮೇಲೆ ಶೇ.70 ರಷ್ಟು ಸುಟ್ಟ ಗಾಯವಾಗಿದೆ.

ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬೆಸ್ಕಾಂ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Electric accidents BESCOM High tension electricity Electric incidents


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ