ಬಿಎಸ್ ವೈಗೆ ಸಂಪೂರ್ಣ ಅಧಿಕಾರ ನೀಡಿದ ಹೈಕಮಾಂಡ್

BSY gets full freedom from high command to take decision

22-07-2019

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿನಕ್ಕೆ ಹೊಸ ತಿರುವು ತೆಗೆದುಕೊಳ್ಳುತ್ತಿದೆ. ಈ ವೇಳೆ ಪರಿಸ್ಥಿತಿ ಗೆ  ಯಾವುದೇ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಬಿಜೆಪಿ ನಾಯಕರಿಗೆ  ಹೈಕಮಾಂಡ್ ಸ್ವತಂತ್ರ ಅವಕಾಶ ಕಲ್ಪಸಿದೆ.
ಬಿಜೆಪಿ ವರಿಷ್ಟ ಮಂಡಳಿ ಕರ್ನಾಟಕದ ವ್ಯವಹಾರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟಿದೆ. ಪಕ್ಷದ ಮುಖ್ಯಸ್ಥ ಅಮಿತ್ ಶಾ, ರಾಜ್ಯದ ಬೆಳವಣಿಗೆಗಳಿಂದ ದೂರವುಳಿದಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿ ಏಕೈಕ ಅತಿದೊಡ್ಡ ಪಕ್ಷವಾಗಿರುವುದರಿಂದ, ಮೈತ್ರಿ ಸರ್ಕಾರವು ವಿಶ್ವಾಸಮತ ಕಳೆದುಕೊಂಡ ನಂತರ ಬಿಜೆಪಿ ಅಧಿಕಾರಕ್ಕೇರುವ ಸ್ವಾಭಾವಿಕ ಹಕ್ಕುದಾರ ಪಕ್ಷವಾಗಲಿದೆ ಆದರೆ,ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತಿಗೆ ವಿಳಂಬ ಮಾಡುವ ಮೂಲಕ ಕಲಾಪದ ಸಮಯವನ್ನು ನುಂಗಿಹಾಕುತ್ತಿದೆ.ಇಂತಹ ಸಮಯದಲ್ಲಿ ಎಲ್ಲದಕ್ಕೂ ಹೈಕಮಾಂಡ್ ನತ್ತ ನೋಡದೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ನೀಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

BSY BS Yadiyurappa BJP High Command Amit Sha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ