ಅತೃಪ್ತರಿಗೆ ಅನರ್ಹತೆಯ ನೋಟೀಸ್

Disqualification notice to rebel MLAs

22-07-2019

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಶಾಸಕರಿಗೆ ಇದೀಗ ಅನರ್ಹತೆಯ ಭೀತಿ ಎದುರಾಗಿದೆ.ಈ ಶಾಸಕರ ವಿರುದ್ಧ ಕಾಂಗ್ರೆಸ್ ನೀಡಿರುವ ದೂರು ಆಧರಿಸಿ ವಿಧಾನಸಭಾದ್ಯಕ್ಷ ರಮೇಶ್ ಕುಮಾರ್ ಕ್ರಮಕ್ಕೆ ಮುಂದಾಗಿದ್ದಾರೆ.
ಮುಂಬೈ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ 12 ಮಂದಿ ಅತೃಪ್ತ ಶಾಸಕರಿಗೆ ಪಕ್ಷಾಂತರ ನಿಷೇಧ ದೂರಿನ ಅರ್ಜಿ ಹಿನ್ನೆಲೆಯಲ್ಲಿ  ನಿಮ್ಮನ್ಯಾಕೆ ಅನರ್ಹಗೊಳಿಸಬಾರದು ಎಂದು ಪ್ರಶ್ನೆ ಕೇಳಿ ನೋಟಿಸ್ ಕೊಟ್ಟು ವಿವರಣೆ ನೀಡುವಂತೆ ಸೂಚಿಸಿದ್ದಾರೆ
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಗೆ ಸೇರಿರುವ ಶಾಸಕರು ತಮ್ಮ ರಾಜಿನಾಮೆ ಸಂಭಂಧ  ವಿವರಣೆ ನೀಡುವಂತೆ ಸಭಾದ್ಯಕ್ಷ ರು  ಸೂಚಿಸಿದ್ದರೂ ಈ ಶಾಸಕರು ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿಲ್ಲ.ಇನ್ನೂ ಅನರ್ಹತೆ ಕುರಿತಾದ ನೋಟಿಸ್ ಗೆ ಉತ್ತರ ನೀಡುವುದು ಅಥವಾ  ವಿಚಾರಣೆಗೆ ಹಾಜರಾಗುವುದು ಅನುಮಾನ.


ಸಂಬಂಧಿತ ಟ್ಯಾಗ್ಗಳು

Rebel MLAs Congress-JDS Coalition Ramesh Kumar BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ