ಕರ್ನಾಟಕ ಬಂದ್: ಪೊಲೀಸರ ಭದ್ರತೆಯ ನಡುವೆ ಬಸ್ ಸಂಚಾರ !

Kannada News

12-06-2017

ವಿಜಯಪುರ:- ಕರ್ನಾಟಕ ಬಂದ್ಹಿನ್ನೆಲೆ, ಬಂದ್ ಬೆಂಬಲಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ) ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಅವರು ಒತ್ತಾಯ ಪೂರ್ವಕವಾಗಿ ಚಲಿಸಿತ್ತಿದ್ದ ಬಸ್ ನ್ನು ನಿಲ್ಲಿಸಿದರು.ಬಸ್ ನಿಲ್ದಾಣದ ಅಂಗಡಿ ಮುಂಗಟ್ಟು ಬಂದ್ ಮಾಡಲು ಯತ್ನಿಸಿದರು, ಘೋಷಣೆ ಕೂಗುತ್ತ ಬಸ್ ನಿಲ್ದಾಣಕ್ಕೆ ಪ್ರತಿಭಟನಾಕಾರರು ಬಂದಿದ್ದು, ಬಸ್ ನಿಲ್ದಾಣದಲ್ಲಿರುವ ಅಂಗಡಿಗಳನ್ನು ಬಲವಂತದಿಂದ ಬಂದ್ ಮಾಡಿಸಲು ಯತ್ನಿಸಿದರು. ಬಸ್ ನಿಲ್ದಾಣದ ಎದುರೇ ಕರವೇ ಕಾರ್ಯಕರ್ತರು ಧರಣಿ ನಡೆಸಿದರು. ಅಲ್ಲದೇ  ಬಸ್ ಹೊರಡುವ ಮಾರ್ಗ ಮಧ್ಯೆ ಕುಳಿತು ಧರಣಿ ನಡೆಸಿ. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸ್ಸುಗಳ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ನಂತರ ಪೊಲೀಸ್ ಸಿಬ್ಬಂದಿಯ ಭದ್ರತೆಯ ನಡುವೆ ಬಸ್ ಸಂಚಾರ ಆರಂಭವಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ