ಶ್ರೀಮಂತ್ ಪಾಟೀಲ್ ಹೇಳಿಕೆ ಪಡೆಯಲು ಮುಂಬೈ ಆಸ್ಪತ್ರೆಗೆ ರಾಜ್ಯ ಪೊಲೀಸ್ ತಂಡ

State police visite Saint jorgeos hospital to get statement of Shrimanth patil

19-07-2019

ಮುಂಬೈ/ಬೆಂಗಳೂರು:ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೈ ಶಾಸಕ ಶ್ರೀಮಂತ್ ಪಾಟೀಲ್ ಹೇಳಿಕೆ ಪಡೆಯಲು ಡಿಸಿಪಿ ಶಶಿಕುಮಾರ್ ನೇತೃತ್ವದ ರಾಜ್ಯ ಪೊಲೀಸ್ ತಂಡ ಸೇಂಟ್ ಜಾರ್ಜಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.

ನಿನ್ನೆ ಕಾಂಗ್ರೆಸ್ ನಾಯಕರು ಶ್ರೀಮಂತ್ ಪಾಟೀಲ್ ರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದರು.ವಿಧಾನಸೌಧ ಠಾಣೆಯಲ್ಲಿ ಶ್ರೀಮಂತ ಪಾಟೀಲ್ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು.

ನಿನ್ನೆ ಸದನದಲ್ಲಿ ಸ್ಪೀಕರ್ ಗೃಹ ಸಚಿವ ಎಂ.ಬಿ.ಪಾಟೀಲ್‍ಗೆ ಕಿಡ್ನಾಪ್ ಆರೋಪ ಸಂಬಂಧ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು. ಶಾಸಕನ ಹೇಳಿಕೆ ಪಡೆಯಲು ಡಿಸಿಪಿ ಶಶಿಕುಮಾರ್ ಮುಂಬೈ ಪೊಲೀಸರ ಅನುಮತಿ ಪಡೆಯಲು ತೆರಳಿದ್ದಾರೆ.

ಅನುಮತಿ ಪಡೆಯಲು ಮುಂಬೈ ಪೊಲೀಸ್ ಆಯುಕ್ತರ ಭೇಟಿಗೆ ಶಶಿಕುಮಾರ್ ತೆರಳಿದ್ದಾರೆ. ಸದ್ಯ ಮುಂಬೈನ ಸೇಂಟ್ ಜಾರ್ಜಸ್ ಆಸ್ಪತ್ರೆಯಲ್ಲಿ ಎದೆ ನೋವಿನ ಕಾರಣ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

Shrimant Patil Congress Karnataka crisis MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ