ಯಾರಿಗೆ ಏನ್ ಪವರ್,ಯಾರಿಗೆ ಏನ್ ಪವರ್ ಇಲ್ಲ: ಡಿ.ಕೆ. ಶಿವಕುಮಾರ್

Governor can only advice, he can

19-07-2019

ಬೆಂಗಳೂರು: ಸೆಕ್ಷನ್ 172 ರಾಜ್ಯಪಾಲರಿಗೆ ನಿಯಮಿತವಾದ ಅಧಿಕಾರ ಕೊಡುತ್ತದೆ. ಇಂದು ನಾವು ಎಲ್ಲ ಕಾನೂನು ದಾಖಲಾತಿಯನ್ನು ವಿಧಾನಸಭೆ ಕಲಾಪಕ್ಕೆ ತೆಗೆದುಕೊಂಡು ಹೋಗಿ ಚರ್ಚೆ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಸಕ್ಕೆ ತೆರಳುವ ಮುನ್ನಾ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಈ ಹಿಂದೆ ಅರುಣಾಚಲಪ್ರದೇಶದ ನಬಂ ತುರ್ಕಿ ಕೇಸ್‍ನಂತೆ ಸುಪ್ರೀಂ ಕೋರ್ಟಿನ ಮೊರೆ ಹೋಗುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ ಕೋರ್ಟ್ ಇರಲಿ, ಜನತಾ ನ್ಯಾಯಾಲಯ ಇದೆ. ನಮ್ಮ ಬಳಿ ಸಂಖ್ಯಾ ಬಲವಿದೆ. ಸಂವಿಧಾನ ನಮಗೆ ಬೇಕಾದಷ್ಟು ಅವಕಾಶ ನೀಡಿದೆ. ಯಾರಿಗೆ ಏನ್ ಪವರ್,ಯಾರಿಗೆ ಏನ್ ಪವರ್ ಇಲ್ಲ ಎಂಬುದರ ಕುರಿತು ಬಹಳ ಚರ್ಚೆ ಮಾಡಬೇಕಿದೆ. ಇದನ್ನು ಇಂದು ಕಲಾಪದಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ಕಿಡಿಕಾರಿದರು.

ನಿನ್ನೆ ಕಲಾಪದ ವೇಳೆ ಸಚಿವ ಮಾಧುಸ್ವಾಮಿ ಸುಪ್ರೀಂಕೋರ್ಟ್ ನಮಗೆ ಸಹಾಯ ಮಾಡುತ್ತಿದೆ ಎಂದಿದ್ದರು.ಹಿಂದೆ ಕೋರ್ಟ್ ನಿಮ್ಮನ್ನು ಕುಣಿಸಿತು ಎಂದಿದ್ದಾರೆ.ಅದರ ಕುರಿತು ನಮ್ಮ ಬಳಿ ದಾಖಲಾತಿಗಳಿವೆ.ಸ್ವಾಮಿ ಅವರೇನು ನಮ್ಮನ್ನು ಕುಣಿಸಿಲ್ಲ. ಕಾನೂನು ಏನ್ ಆಗಿದೆ ಅದಾಗಿದೆ. ಈ ಕುರಿತು ಇಂದು ಚರ್ಚೆ ಮಾಡಲಾಗುತ್ತದೆ ಎಂದರು.

ಬಿಜೆಪಿಯವರು ಮಂಗ ಮಾಡಲು ಹೊರಟಿದ್ದಾರೆ. ಅತೃಪ್ತ ಶಾಸಕರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಒಮ್ಮೆ ರಾಜೀನಾಮೆ ನೀಡಿದರೆ ಶಾಸಕರು ಮಂತ್ರಿಯಾಗೋಕೆ ಸಾಧ್ಯವಿಲ್ಲ. ಭವಿಷ್ಯ ಹಾಳು ಮಾಡಿಕೊಳ್ಳದೆ ರಾಜೀನಾಮೆ ಹಿಂಪಡೆದುಕೊಳ್ಳಿ ಎಂದು ನನ್ನ ಶಾಸಕ ಸ್ನೇಹಿತರಿಗೆ ಕಳಕಳಿಯ ಮನವಿ ಮಾಡಿದರು.

ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ರಾಜ್ಯಪಾಲರು ಪತ್ರ ಕುರಿತು ಪ್ರತಿಕ್ರಿಯಿಸಿ, ಗವರ್ನರ್ ಪತ್ರ ಬರೆದಿದ್ದು, ಬಹಳ ಸಂತೋಷ. ಆದರೆ ಗವರ್ನರ್ ಸ್ಪೀಕರ್‍ಗೆ ಮಾರ್ಗದರ್ಶನ ನೀಡಬಹುದು ಅಷ್ಟೇ. ಆದೇಶ ಮಾಡಲು ಬರುವುದಿಲ್ಲ.ನಾವು ಸದನದಲ್ಲಿ ಶಾಸನಸಭೆಯ ನಿಯಮಾವಳಿ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಚರ್ಚೆಗೂ ಮುನ್ನವೇ ಪ್ರತಿಪಕ್ಷ ಅವಸರ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಅತೃಪ್ತರು ಇನ್ನೂ ನಾವು ಕಾಂಗ್ರೇಸ್ ನವರು ಎಂದೇ ಎಲ್ಲ ಕಡೆ ಹೇಳಿಕೊಳ್ಳುತ್ತಿದ್ದಾರೆ. ಅವರು ಯಾವ ಪಕ್ಷಕ್ಕೂ ಸೇರಿಲ್ಲ. ಗವರ್ನರ್‍ಗೆ ಅತೃಪ್ತ ಶಾಸಕರು ಕಾಂಗ್ರೆಸ್ ಬೆಂಬಲ ವಾಪಾಸ್ಸು ಪಡೆದಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ.ಇದನ್ನೇ ಅವರು ಸಾಬೀತು ಮಾಡಲಿ. ಸುಖಾಸುಮ್ಮನೆ ದಿಕ್ಕು ತಪ್ಪಿಸುವ ಕಾರ್ಯತಂತ್ರ ಬೇಡ.ಬಿಜೆಪಿಯವರು ಅತೃಪ್ತರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಶಾಸಕರು ಯಾರೂ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಫೋನ್ ಸ್ವಿಚ್ ಆಫ್ ಆಗಿದೆ ಎಂದರು.
 


ಸಂಬಂಧಿತ ಟ್ಯಾಗ್ಗಳು

DK Shivakumar Congress Governor Vajubhai vala


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ