ಎಸ್‍ಐಟಿಗೆ ದಾಖಲೆ ಪತ್ರ ನೀಡಿ ಹೊರ ಬಂದ ರೋಷನ್ ಬೇಗ್

Roshan baig comes out submitting documents to SIT

19-07-2019

ಬೆಂಗಳೂರು:ಎಸ್‍ಐಟಿ ಕಚೇರಿಯಲ್ಲಿ ಶಿವಾಜಿನಗರ ಶಾಸಕ ಆರ್. ರೋಷನ್‍ಬೇಗ್ ಅವರನ್ನು ಅಧಿಕಾರಿಗಳು ಅರ್ಧಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು.ರೋಷನ್ ಬೇಗ್ ಕೆಲ ದಾಖಲೆ ನೀಡಿ, ವಿಚಾರಣೆ ಮುಗಿಸಿ ಹೊರಬಂದರು.

ಬಳಿಕ ಬೇಗ್ ಅವರು ಮಾಧ್ಯಮದವರ ಕ್ಯಾಮರಾಗೆ ಕೈ ಮುಗಿದು ಪ್ರತಿಕ್ರಿಯೆ ನೀಡದೇ ಹೋದರು.

15ನೇ ತಾರೀಖು ಎಸ್‍ಐಟಿ ವಶಕ್ಕೆ ಪಡೆದು ತನಿಖಾಧಿಕಾರಿಗಳು ವಿಚಾರಣೆ ನಡೆಸಿ ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ರು. ಹೀಗಾಗಿ ಇಂದು ರೋಷನ್ ಬೇಗ್ ತನಿಖಾಧಿಕಾರಿಗಳ ಎದುರು ಹಾಜರಾಗಿದ್ದರು.

ಮನ್ಸೂರ್ ಖಾನ್ ಆಡಿಯೋದಲ್ಲಿ ಬೇಗ್ ಹೆಸರು ಪ್ರಸ್ತಾಪ ಮಾಡಿ ಶಾಸಕರ ಬಳಿ ಐಎಂಎ ಹಣವಿದೆ ಎಂದು ಮನ್ಸೂರ್ ಆರೋಪಿಸಿದ್ದರು. ಹೀಗಾಗಿ ಮನ್ಸೂರ್ ಆರೋಪದ ಮೇಲೆ ತನಿಖೆ ನಡೆಸಿದ ಎಸ್‍ಐಟಿ ಅಧಿಕಾರಿಗಳು ಇಂದು ರೋಷನ್ ಬೇಗ್ ಪಾತ್ರದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

ಮತ್ತೊಂದೆಡೆ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪಡಿಸುವ ಹಿನ್ನೆಲೆ ಕೇವಲ ಅರ್ಧಗಂಟೆ ಮಾತ್ರ ಬೇಗ್‍ರನ್ನ ವಿಚಾರಣೆ ಮಾಡಿದರು. ಅವಶ್ಯಕತೆ ಬಿದ್ರೆ ಮುಂದಿನ ವಿಚಾರಣೆಗೆ ಕರೆಸುವುದಾಗಿ ಬೇಗ್ ಅವರಿಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇಂದು ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ಯಾಚನೆ ಮಾಡುವ ಹಿನ್ನೆಲೆ ಬೇಗ್ ಅವರು ಕಲಾಪಕ್ಕೆ ತೆರಳ್ತಾರಾ ಅನ್ನೋದು ತೀವ್ರ ಕುತೂಹಲಕಾರಿಯಾಗಿದೆ.
 


ಸಂಬಂಧಿತ ಟ್ಯಾಗ್ಗಳು

Roshan Baig Mohammed mansoor khan SIT IMA scam


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ