ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೆ ಸ್ವಾಗತ: ಶಿವಲಿಂಗೇಗೌಡ

we will welcome if President rule imposed in karnataka: Shivalingegowda

19-07-2019

ಬೆಂಗಳೂರು:ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಸಂವಿಧಾನದ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೆ ಸ್ವಾಗತ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ,ರಾಜ್ಯಪಾಲರು ಸದನದೊಳಗೆ ನಿಯಮಾವಳಿ ಪ್ರಕಾರ ನಡೆಯುವ ಕಲಾಪಗಳಿಗೆ ಸಂದೇಶ ನೀಡಬಹುದು. ಸಂದೇಶದ ಪ್ರಕಾರ ನಡೆದುಕೊಳ್ಳಿ ಎಂದು ಹೇಳಬಹುದೆ ಹೊರತು, ಹೀಗೆ ನಡೆದುಕೊಳ್ಳಲೇಬೇಕು ಎನ್ನುವಂತಿಲ್ಲ. ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯವರು ರಾತ್ರೋರಾತ್ರಿ ನಮ್ಮ ಶಾಸಕರನ್ನು ಹೊತ್ತೊಯ್ಯುತ್ತಿದ್ದಾರೆ. ಬಿಜೆಪಿಯವರು ಮುಖ್ಯಮಂತ್ರಿ ಕುರ್ಚಿಗಾಗಿ ರಾಜ್ಯದಲ್ಲಿ ಅರಾಜಕತೆ ನಡೆಸುತ್ತಿದ್ದಾರೆ. ಜನ ಬಿಜೆಪಿ ಶಾಸಕರನ್ನು ಉಗಿಯುತ್ತಿದ್ದಾರೆ. ಸಂವಿಧಾನದ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ವಿಶ್ವಾಸ ಮತಯಾಚನೆ ವಿಳಂಬವಾಗುತ್ತಿದೆ. ಸಂವಿಧಾನದ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೆ ಸ್ವಾಗತ ಎಂದರು.


ಸಂಬಂಧಿತ ಟ್ಯಾಗ್ಗಳು

Shivalingegowda JDS BJP president rule


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ