ರಾಮಲಿಂಗಾ ರೆಡ್ಡಿ ನಿರ್ಧಾರ ನಮಗೆ ಆಘಾತ ತಂದಿದೆ: ಎಂಟಿಬಿ ನಾಗರಾಜ್

we are not satisfied with Ramalinga reddy

19-07-2019

ಬೆಂಗಳೂರು:ಅತೃಪ್ತ ಶಾಸಕರಿಂದ ಇದೀಗ ಮತ್ತೊಂದು ವಿಡಿಯೋ ಸಂದೇಶ ಬಿಡುಗಡೆಯಾಗಿದ್ದು,ಈ ಬಾರಿ ಎಂಟಿಬಿ ನಾಗರಾಜ್ ರಾಮಲಿಂಗಾರೆಡ್ಡಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಎಂಟಿಬಿ ನಾಗರಾಜ್ ಅವರು ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶವನ್ನು ಬಿಡುಗಡೆಗೊಳಿಸಿದ್ದು, ರಾಜೀನಾಮೆ ಪತ್ರ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ ಅವರ ನಿರ್ಧಾರದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ರಾಮಲಿಂಗಾ ರೆಡ್ಡಿ ನಿರ್ಧಾರದಿಂದ ನಮಗೆಲ್ಲರಿಗೂ ಆಘಾತವಾಗಿದೆ. ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶಾಸಕರು ಅನೇಕ ಬಾರಿ ಸಭೆ ನಡೆಸಿ ರಾಜೀನಾಮೆ ನಿರ್ಧಾರ ಕೈಗೊಳ್ಳಲಾಗಿದೆ. ರಾಮಲಿಂಗಾರೆಡ್ಡಿ ನಾಯಕತ್ವದಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರಿಗೆ ಅನ್ಯಾಯವಾಗುತ್ತಿದೆ ಎಂಬುದರ ಕುರಿತು ಚರ್ಚಿಸಿ ನಾವೆಲ್ಲರೂ ಒಗ್ಗಟ್ಟಾಗಿ ಶಾಸಕ ಸ್ಥಾನದಿಂದ ರಾಜೀನಾಮೆ ನೀಡೋಣ ಎಂದು ನಿರ್ಧರಿಸಲಾಗಿತ್ತು. ಇದೀಗ ಅವರು ರಾಜೀನಾಮೆ ಪತ್ರ ವಾಪಸ್ ಪಡೆದಿರುವ ನಿರ್ಧಾರ ನಮಗೆ ಆಘಾತ ತಂದಿದೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

MTB Nagaraj JDS Congress BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ