ಅವಿಶ್ವಾಸ ನಿರ್ಣಯ ಕುರಿತು ಸ್ಪೀಕರ್ ನಿರ್ಣಯ: ರೇವಣ್ಣ

Speaker will decide about majority prove

19-07-2019

ಬೆಂಗಳೂರು: ಅವಿಶ್ವಾಸ ನಿರ್ಣಯದ ಬಗ್ಗೆ ಸ್ಪೀಕರ್ ಅವರು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಹೆಚ್.ಡಿ.ರೇವಣ್ಣ ರಾಜ್ಯಪಾಲರ ಆದೇಶದ ಬಗ್ಗೆ ಚಾಮುಂಡಿ ಬೆಟ್ಟದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು 3 ನೇ ಆಷಾಢ ಶುಕ್ರವಾರದ ನಿಮಿತ್ತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದ ಅವರು,ಸತತ 3ನೇ ವಾರ ಕೂಡ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಅವಿಶ್ವಾಸ ನಿರ್ಣಯದ ಬಗ್ಗೆ ನಾವೇ ರಾಜ್ಯಪಾಲರ ಬಳಿ ಸಮಯ ಕೇಳಿದ್ದೆವು.ಸಭೆಗೆ ಬಿಜೆಪಿ ಅವರು ಬರಲಿಲ್ಲ ಆದರೆ ಈ ಬಗ್ಗೆ 3 ದಿನಾಂಕಗಳು ನಿಗದಿಯಾಗಿದ್ದು ನಿನ್ನೆ ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ರಾಜ್ಯಪಾಲರು ಅವಿಶ್ವಾಸ ನಿರ್ಣಯದ ಮೇಲೆ ಓಟು ಹಾಕುವಂತೆ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.ಈ ಬಗ್ಗೆ ಸ್ಪೀಕರ್ ಅವರು ತಿರ್ಮಾನ ಕೈಗೊಳ್ಳುತ್ತಾರೆ ಎಂದರು.

ಅವಿಶ್ವಾಸ ನಿರ್ಣಯದ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ. ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನೆಲೆ ಕೆಲವು ವಿಚಾರಗಳನ್ನು ಸ್ಪಷ್ಟ ಪಡಿಸಬೇಕಾಗಿದ್ದು ಇದರಿಂದ ಚರ್ಚೆ ನಡೆಯುತ್ತಿದೆ. ಅವಿಶ್ವಾಸ ನಿರ್ಣಯ ವಿಚಾರದಲ್ಲಿ 1996 ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರು 10 ದಿನ ಕಾಲಾವಕಾಶ ತೆಗೆದುಕೊಳ್ಳಲಿಲ್ಲವೆ ಎಂದು ಸಚಿವ ರೇವಣ್ಣ ಪತ್ರಕರ್ತರನ್ನು ಪ್ರಶ್ನೆ ಮಾಡಿದರು.


ಸಂಬಂಧಿತ ಟ್ಯಾಗ್ಗಳು

HD Revanna HD Kumaraswamy JDS BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ