ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ: ಸಿ.ಎಂ

HD Kumaraswamy Statement

19-07-2019

ಬೆಂಗಳೂರು: ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು ಅಧಿಕಾರದ ಎಳು ಬೀಳುಗಳನ್ನು ಕಂಡಿದ್ದೇನೆ ನಾನು ಕೇವಲ ಸಾಂದರ್ಭಿಕ ಶಿಶು ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ‌ಮಾಡಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮುಖ್ಯಮಂತ್ರಿ ಯಾರಾಗ್ತಾರೋ, ಯಡಿಯೂರಪ್ಪ ಸಿಎಂ ಆಗ್ತಾರೋ ಇದೆಲ್ಲ ಅಪ್ರಸ್ತುತ ಇಲ್ಲಿ. ಆದ್ರೆ ರಾಜಕೀಯ ಅಣಕವಾಗಬಾರದು. ಇತಿಹಾಸದ ಪುಟಗಳಿಗೆ ಸೇರ್ತೀವಿ ನಾವು ಎಂದು ಹೇಳಿದರು.
ಶಾಸಕರನ್ನು ರೇಣುಕಾಚಾರ್ಯ ಕಾಯುತ್ತಿದ್ದಾರೆ. ಯಾರಾದ್ರೂ ಎಲ್ಲಾದ್ರೂ ಹೋಗುತ್ತಾರೋ ಎಂದು ಇದೇ ರೇಣುಕಾಚಾರ್ಯ ಬಿಎಸ್‍ವೈ ಬಗ್ಗೆ ಎಷ್ಟೆಲ್ಲ ಮಾತಾನಾಡಿಲ್ಲ ಹೇಳಿ ಎಂದು ಕೆಣಕಿದರು.
ರೇವಣ್ಣನಿಗೆ ನಿಂಬೆಹಣ್ಣು, ದೇವಸ್ಥಾನಕ್ಕೆ ಹೋಗ್ತಾನೆ, ಮಾಟಮಂತ್ರ ಮಾಡುತ್ತಾರೆ ಎಂದು ಲೇವಡಿ ಮಾಡುತ್ತಾರೆ. ನಮ್ಮದು ದೇವರನ್ನು ನಂಬುವ ಕುಟುಂಬ. ಮಾಟ ಮಂತ್ರ ಮಾಡುವ ಕುಟುಂಬವಲ್ಲ. ಆಂಜನೇಯ ದೇವಸ್ಥಾನ ಕ್ಕೆ ಹೋದಾಗ ನಿಂಬೆಹಣ್ಣು ಕೊಡಲ್ವೇ, ಅದನ್ನು ಮಾಟ ಮಂತ್ರ ಅನ್ನೋಕಾಗುತ್ತಾ ಎಂದು ಸಿಎಂ ಬಿಜೆಪಿಯವರಿಗೆ ಪ್ರಶ್ನೆ ಮಾಡಿದರು.
ನಮ್ಮದು ಆ ವಂಶವಲ್ಲ. ಬಿಜೆಪಿಯವರು ದೇವರ ಹೆಸರು ರಾಮನ ಹೆಸರಿನಲ್ಲಿ ಮತ ಕೇಳ್ತೀರಿ. ನಿಂಬೆಹಣ್ಣು ಮಾಟ ಮಂತ್ರದಿಂದ ಸರ್ಕಾರ ಉಳಿಸೋದಾದ್ರೇ ಚುನಾವಣೆ ಯಾಕೆ ಬೇಕು, ಜನರ ಬಳಿ ಯಾಕೆ ಹೋಗಬೇಕು. ಇಲ್ಲಿಂದಲೇ ಮಾಟ ಮಂತ್ರ ಮಾಡಿ ಸರ್ಕಾರ ಉಳಿಸಬಹುದಲ್ಲವೇ ಎಂದು ಬಿಜೆಪಿ ವಿರುದ್ಧ ಸಿಎಂ ಹರಿಹಾಯ್ದರು.


ಸಂಬಂಧಿತ ಟ್ಯಾಗ್ಗಳು

HD Kumaraswamy HD Revanna Session Karnataka Cm


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ