ಸಂತ್ರಸ್ತರ ಭೇಟಿಗೆ ಅವಕಾಶ ನೀಡದ್ದಕ್ಕೆ ಪ್ರಿಯಾಂಕಾ ಪ್ರತಿಭಟನೆ

Priyanka Gandhi Sits In Protest Post Being Stopped From Visiting Site

19-07-2019

ಲಖ್ನೋ: ಭೂವಿವಾದಕ್ಕೆ ಸಂಬಂಧಿಸಿದಂತೆ ವಾರಾಣಸಿಯ ನಾರಾಯಣಪುರದ ಸೋನಭದ್ರದಲ್ಲಿ ಜುಲೈ 17ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಸಂತ್ರಸ್ತರನ್ನು ಭೇಟಿಯಾಗಲು ಉತ್ತರಪ್ರದೇಶ ಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಗಮಿಸಿದರು. ಆದರೆ, ಸಂತ್ರಸ್ತರ ಭೇಟಿಗೆ ಅವಕಾಶವನ್ನು ಸ್ಥಳೀಯ ಆಡಳಿತ ನಿರಾಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ, ನಾನು ಕೇವಲ ಸಂತ್ರಸ್ತರನ್ನು ಮತ್ತು ಅವರ ಕುಟುಂಬಸ್ಥರನ್ನು, ಭೇಟಿಯಾಗಲು ಆಗಮಿಸಿದ್ದೇನೆ. ನನ್ನೊಂದಿಗೆ ಕೇವಲ 4 ಜನರಿದ್ದಾರೆ. ಇದುವರೆಗೆ ಭೇಟಿಗೆ ಆಡಳಿತ ಅವಕಾಶವನ್ನು ನೀಡಿಲ್ಲ. ನಮ್ಮನ್ನು ತಡೆದಿರುವುದು ಏಕೆ ಎಂದು ಅವರು ತಿಳಿಸಬೇಕು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಅವರನ್ನು ಅಜ್ಞಾತ ಸ್ಥಳದತ್ತ ಕರೆದೊಯ್ದರು. ಈ ವೇಳೆ ತಮ್ಮನ್ನು ಬಂಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ನಾವು ಶಾಂತಿಯುತವಾಗಿ ಸಂತ್ರಸ್ತರ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದೆವು. ನಮ್ಮನ್ನು ಅವರು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲಿಗೆ ಕರೆದೊಯ್ದರೂ ನಾವು ಹೋಗಲು ಸಿದ್ಧ ಎಂದರು.


ಸಂಬಂಧಿತ ಟ್ಯಾಗ್ಗಳು

Priyanka Gandhi Uttar Pradesh Sonbhadra Firing Protest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ