ಗೋರಕ್ಷಣೆ ಹೆಸರಿನಲ್ಲಿ ದಾಳಿ: ಮೂವರ ಹತ್ಯೆ

3 Beaten To Death On Suspicion Of Cattle Theft

19-07-2019

ಪಾಟ್ನಾ: ಬಿಹಾರದ ಬನಿಯಾಪುರದಲ್ಲಿ ಸ್ಥಳೀಯರು ಗೋರಕ್ಷಣೆಯ ಅನುಮಾನದ ಮೇಲೆ ಮೂವರನ್ನು ಅಮಾನುಷವಾಗಿ ಥಳಿಸಿ ಹತ್ಯೆಗೈದಿದ್ದಾರೆ. ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ಗೋರಕ್ಷರ ದಾಳಿಗೆ ಬಲಿಯಾಗಿರುವವರ ಮೃತ ದೇಹಗಳನ್ನು ಶವಪರೀಕ್ಷೆಗೆ ರವಾನೆ ಮಾಡಲಾಗಿದೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳ ಕಾಲಿಗೆ ಬಿದ್ದ ಕುಟುಂಬಸ್ಥರು, ತಮ್ಮವರನ್ನು ಉಳಿಸಿಕೊಡಿ, ನ್ಯಾಯಕೊಡಿ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಿ, ರಕ್ಷಣೆ ಕೊಡಿ ಇತ್ಯಾದಿಯಾಗಿ ಮನವಿ ಮಾಡಿಕೊಂಡು ಅಂಗಲಾಚುತ್ತಿದ್ದ ದೃಶ್ಯ ಕರುಳು ಕಿವಿಚುವಂತಿತ್ತು. ಈ ಘಟನೆಯಿಂದ ಕೆಲಕಾಲ ಪೊಲೀಸರು ಕೂಡ ಅಸಹಾಯಕರಾಗಿ ಕಂಡುಬಂದರು.

ದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ. ಆದರೆ, ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. 2016ರರಲ್ಲಿ ಉತ್ತರಪ್ರದೇಶದಲ್ಲಿ ಅಖ್ಲಾಕ್ ಹತ್ಯೆಯಾದ ನಂತರ ಬಿಹಾರ, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಹಾಗೂ ಉತ್ತರಪ್ರದೇಶ ಮೊದಲಾದ ರಾಜ್ಯಗಳಲ್ಲಿ, ಅದರಲ್ಲೂ ಬಿಜೆಪಿ ಮತ್ತು ಅದರ ಮೈತ್ರಿ ಕೂಟ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ರೀತಿಯ ಹತ್ಯೆಗಳು ನಡೆಯುತ್ತಿವೆ.

ಈ ಸಂಬಂಧ ಸುಪ್ರೀಂ ಕೋರ್ಟ್‍ನಲ್ಲಿ ಕೂಡ ವಿಚಾರಣೆ ನಡೆಯುತ್ತಿದೆ. ಆದರೂ ಹತ್ಯೆಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರೇ ಎರಡು ಬಾರಿ ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಲ್ಲದೇ, ಅಂತವರು ಗೋರಕ್ಷಕರಲ್ಲ, ಸಮಾಜಘಾತುಕರು ಎಂದಿದ್ದರು. ಆದರೂ ಈ ಸರಣಿ ಮುಂದುವರೆಯುತ್ತಿದೆ.


ಸಂಬಂಧಿತ ಟ್ಯಾಗ್ಗಳು

Cattle Theft Patna Bihar Law


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ