ತೆಲುಗು ಚಿತ್ರ ನಟನಿಗೂ ತಗುಲಿದ ಬಂದ್ ಬಿಸಿ !

Kannada News

12-06-2017

ಕೋಲಾರ:- ನೀರಾವರಿ ಯೋಜನೆಗಳಿಗೆ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕೋಲಾರದಲ್ಲಿ  ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೋಲಾರ ನಗರದ ವಿವಿಧಡೆ ಬೆಳಿಗ್ಗೆಯಿಂದಲೇ ರಸ್ತೆಗಿಳಿದ ಹೋರಾಟಗಾರರು, ರಸ್ತೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ರಸ್ತೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಇಳಿಯದಂತೆ ಡಿಪೋ ಬಳಿ ಪ್ರತಿಭಟನೆ ನಡೆಸಿದರು. ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದ ಹೋರಾಟಗಾರರು ಬಂದ್‌ಗೆ ಬೆಂಬಲ ಸೂಚಿಸಲು ಮನವಿ ಮಾಡಿದರು. ಪೊಲೀಸರ ಬಿಗಿ ಭದ್ರತೆಯಲ್ಲೂ ಸಾರಿಗೆ ಬಸ್ ನಿಲ್ದಾಣದ ಬಳಿ ಕಿಡಿಗೇಡಿಗಳು ಬಸ್‌ಗೆ ಕಲ್ಲು ತೂರಿದ್ದಾರೆ. ನಂತರ ರಸ್ತೆಗಳಲ್ಲಿ ಸಂಚರಿಸಿ ಬಂದ್‌ಗೆ ಬೆಂಬಲಿಸಲು ಸಾರ್ವಜನಿಕರನ್ನು ಮನವಿ ಮಾಡಿದರು. ಇನ್ನು ತೆಲುಗಿನ ಎನ್.ಟಿ.ಆರ್ ಮೊಮ್ಮಗ ನಂದಮೂರಿ ತಾರಕರತ್ನ ಅವರಿಗೂ ಸಹ ಬಂದ್ ಬಿಸಿ ತಟ್ಟಿತು. ಕೋಲಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರತಿಭಟನಾಕಾರರು ಕಾರನ್ನು ತಡೆಹಿಡಿದರು, ನಂತರ ಕಾರಿನಿಂದ ಇಳಿದ ನಂದಮೂರಿ ತಾರಕರತ್ನ ಬಂದ್‌ಗೆ ಬೆಂಬಲ ಸೂಚಿಸಿದ ನಂತರವೇ ಕಾರನ್ನು ಬಿಡಲಾಗಿತ್ತು. ಇದೇ ವೇಳೆ ಹೆದ್ದಾರಿ ತಡೆಯಲು ಮುಂದಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಬಂದ ಅಹಿಂದ ಸಂಘಟನೆಯ ಮಂಜು ಹಾಗು ಎಬಿವಿಪಿ ನವೀನ್ ನನ್ನು ಬಂಧಿಸಲಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ