ಸಾಲದ ಶೂಲದೆಡೆಗೆ ಅನೇಕ ಸಚಿವರು!

Ministers

18-07-2019

ಸದ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ. ಆದರೆ ಈ ಸರ್ಕಾರದಲ್ಲಿರುವ ಅನೇಕ ಸಚಿವರಿಗೆ ಟೆನ್ಶನ್ ಶುರುವಾಗಿದೆಯಂತೆ. ಅದು ಬೇರೇನಲ್ಲಕ್ಕಲ್ಲ, ಬದಲಾಗಿ ಅವರು ಮಾಡಿಕೊಂಡಿರೋ ಸಾಲಕ್ಕೆ.

ಹೌದು.. ಸದ್ಯದ ಸರ್ಕಾರದಲ್ಲಿದ್ದ ಅನೇಕ ಸಚಿವರಿಗೆ ವಿಪರೀತ ಸಾಲವಿದೆಯಂತೆ. ಹೇಗಿದ್ರೂ ಸರ್ಕಾರ 5 ವರ್ಷ ನಡೆಯುತ್ತೆ ಅನ್ನೋ ನಂಬಿಕೆಯಲ್ಲಿ ಎರ್ರಾಬಿರ್ರಿ ಸಾಲ ಮಾಡಿದ್ದು, ಅದಕ್ಕೆ ಬಡ್ಡಿಯನ್ನೂ ಕೂಡ ಸರಿಯಾಗಿ ಕಟ್ಟಿಲ್ಲವಂತೆ. ಇದೀಗ ಸರ್ಕಾರ ಉರುಳಿಹೋದರೆ ಅಷ್ಟು ದೊಡ್ಡ ಮೊತ್ತದ ಸಾಲವನ್ನು ಹೇಗಪ್ಪಾ ತೀರಿಸೋದು ಎಂದು ಯೋಚಿಸುತ್ತಿದ್ದಾರಂತೆ. ಅದಕ್ಕಾಗಿಯೇ ಸರ್ಕಾರ ಬಿದ್ದು ಹೋಗೋಕಿಂತ ಮೊದಲೇ ಕೆಲ ಕೆಲಸಗಳಿಗೆ ಕಮಿಷನ್ ಕೂಡ ಪಡೆದಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ ಜನಸಾಮಾನ್ಯರು ಸಾಲ ಮಾಡೋದು, ತೀರಿಸೋದು ಅಥವಾ ತೀರಿಸೋಕಾಗದೇ ಒದ್ದಾಡೋದು ಸಾಮಾನ್ಯ. ಆದರೆ ರಾಜ್ಯದ ಮಂತ್ರಿಗಳಾಗಿರುವವರೇ ವಿಪರೀತ ಸಾಲಮಾಡಿಕೊಂಡು ಟೆನ್ಶನ್ ಮಾಡಿಕೊಳ್ತಿದ್ದಾರೆ ಅನ್ನೋದೇ ನಂಬದಲಾಗದ ಸತ್ಯ.

 


ಸಂಬಂಧಿತ ಟ್ಯಾಗ್ಗಳು

Ministers Session Government Karnataka Crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ