ಕರ್ನಾಟಕ ಬಂದ್: ಬೈಕ್ ಜಾಥಾಗೆ ಪೊಲೀಸರಿಂದ ತಡೆ !

Kannada News

12-06-2017

ಮಂಡ್ಯ:- ಕರ್ನಾಟಕ ಬಂದ್ ಹಿನ್ನೆಲೆ, ಬಂದ್ ಗೆ ಕಾವೇರಿ ಕೊಳ್ಳದ ಜನರು ವಿವಿಧ ಸಂಘಟನೆಗಳ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಸೇನೆ, ರೈತ ಸಂಘ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳಿಂದ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದ ಸಂಜಯ್ ವೃತ್ತದಲ್ಲಿ ರಸ್ತೆ ತಡೆದ ಪ್ರತಿಭಟನಾಕಾರರು ಬೈಕ್  ಜಾಥಾ ಗೆ ಯತ್ನಿಸಲಾಯಿತು, ಆದರೆ ಬೈಕ್ ಜಾಥಾವನ್ನು ತಡೆದ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಆದರೆ ಪ್ರತಿಭಟನಾ ನಿರತ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಕರ್ನಾಟಕ ಬಂದ್ ಗೆ ಮಂಡ್ಯದಲ್ಲಿ ಬೆಂಬಲ ಸೂಚಿಸಿದ್ದಾರೆ. ಇನ್ನು ಹಾಸನದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಸನದಲ್ಲಿ ಎಂದಿನಂತೆ ಸಂಚರಿಸುತ್ತಿರುವ ಬಸ್ ಮತ್ತು ಆಟೊಗಳು. ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಶಾಲಾ, ಕಾಲೇಜುಗಳಿಗೆ ರಜೆ ಇಲ್ಲವೆಂದು ಹಾಸನ ಡಿಸಿ ಚೈತ್ರ ಅವರು ತಿಳದಿಸಿದ್ದು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು ವ್ಯಪಾರವು ಸರಾಗವಾಗಿ ಸಾಗಿದೆ, ಹೀಗಾಗಿ ಹಾಸನದಲ್ಲಿಯೂ ಬಂದ್ ಗೆ ಪೂರಕ ಬೆಂಬಲ ವ್ಯಕ್ತವಾಗಿಲ್ಲ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ