ವಿಧಾನ ಸೌಧಕ್ಕೆ ಪೊಲೀಸ್ ಸರ್ಪಗಾವಲು

Police Security around Vidhana Soudha

18-07-2019

ಬೆಂಗಳೂರು: ಅತೃಪ್ತ ಶಾಸಕರ ಬಂಡಾಯದಿಂದ ಮೈತ್ರಿ ಸರ್ಕಾರ ಅಳಿವು ಉಳಿವಿನ ಹಂತ ತಲುಪಿರುವ ಬೆನ್ನಲ್ಲೇ ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಬೆಂಗಳೂರು ನಗರ ಪೊಲೀಸ್, ಮೀಸಲುಪಡೆ, ಗೃಹರಕ್ಷಕ ದಳ, ಅರೆ ಸೇನಾಪಡೆ ಸೇರಿದಂತೆ ಹಲವು ಪೊಲೀಸ್ ದಳಗಳನ್ನು ಭದ್ರತೆಯ ಕೆಲಸಕ್ಕೆ ನಿಯೋಜಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿಧಾನಸೌದ ಸುತ್ತಮುತ್ತ, ರಾಜಭವನದ ಸುತ್ತಮುತ್ತ ಬರೋಬ್ಬರಿ ಐದು ಸಾವಿರ ಪೊಲೀಸರನ್ನು ನಿಯೋಜನೆ ಮಾಡಿದ್ದು ಎಚ್ಚರಿಕೆ ವಹಿಸಲಾಗಿದೆ.
ನಗರದ ಎಲ್ಲಾ ಪೊಲೀಸರು, ಬೆಂಗಳೂರು ಹೊರವಲಯದ ಪೊಲೀಸರು, 15 ಪೆಟ್ಲೋನ್ ಕೆಎಸ್‌ಆರ್‌ಪಿಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ಎಲ್ಲಾ ಪ್ರಮುಖ ರಾಜಕಾರಣಿಗಳ ಮನೆಗೆ ಬಂದೋಬಸ್ತ್ ಮಾಡಲಾಗಿದೆ.
ನಾಯಕರಾದ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ,ಪರಮೇಶ್ವರ್ ಹಾಗೂ ಅತೃಪ್ತ ಶಾಸಕರಾದ ಸೋಮಶೇಖರ್, ಮುನಿರತ್ನ, ಗೋಪಾಲಯ್ಯ,ಮತ್ತು ಶಂಕರ್ ನಿವಾಸಗಳಿಗೆ ಹೆಚ್ಚಿನ ಭದ್ರತೆ ಹಾಕಲಾಗಿದೆ.


ಸಂಬಂಧಿತ ಟ್ಯಾಗ್ಗಳು

VidhanaSoudha Session Police Security Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ