ವಿಶ್ವಾಸಮತ ಗೆಲ್ಲುವುದು ಕಷ್ಟ.. ಸರ್ಕಾರದ ಪತನ ನಿಶ್ಚಿತ?

Karnataka Government Crisis

17-07-2019

ಬೆಂಗಳೂರು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗ ಹೊಂದಿರುವ ಸಂಖ್ಯಾ ಬಲಾಬಲವನ್ನು ಗಮನಿಸಿದರೆ ವಿಶ್ವಾಸಮತ ಗೆಲ್ಲುವುದು ಕಷ್ಟವಾಗಲಿದ್ದು, ಸರ್ಕಾರ ಬೀಳುವುದು ಖಚಿತವಾಗಿದೆ. 15 ಅತೃಪ್ತ ಶಾಸಕರ ರಾಜೀನಾಮೆಯಿಂದ ದೋಸ್ತಿ ಪಕ್ಷಗಳ ಸಂಖ್ಯೆ 115 ರಿಂದ 100 ಕ್ಕೆ ಇಳಿದಿದೆ. ಅಂಕಿ ಸಂಖ್ಯೆಗಳ ಲೆಕ್ಕಾಚಾರದಲ್ಲಿ ದೋಸ್ತಿ ಪಕ್ಷಗಳು ಸದ್ಯ ಹಿಂದೆ ಬಿದ್ದಿವೆ. ಬಿಜೆಪಿ ಸಂಖ್ಯಾಬಲದಲ್ಲಿ ಮುಂದಿದ್ದು, ದೋಸ್ತಿ ಪಕ್ಷಗಳಿಗೆ ವಿಶ್ವಾಸಮತ ಗೆಲ್ಲುವುದು ಅಷ್ಟು ಸುಲಭವಲ್ಲ. ಒಟ್ಟು 224 ವಿಧಾನಸಭೆಯ ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಈಗ ಬಿಜೆಪಿಯೇ ಅತಿ ಹೆಚ್ಚು ದೊಡ್ಡ ಪಕ್ಷವಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡಾಗ ಪಕ್ಷೇತರರ ನೆರವಿನಿಂದ ದೋಸ್ತಿ ಪಕ್ಷಗಳ ಸಂಖ್ಯಾ ಬಲ 118 ಇತ್ತು. ಈಗ ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿರುವುದರಿಂದ ಸಭಾಧ್ಯಕ್ಷ ರಮೇಶ್‍ಕುಮಾರ್ ರವರನ್ನು ಹೊರತುಪಡಿಸಿ ದೋಸ್ತಿ ಪಕ್ಷಗಳ ಬಲಾಬಲ 115. ಇದರಲ್ಲಿ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಗಾಗಿ ದೋಸ್ತಿ ಪಕ್ಷಗಳ ಬಲ ಈಗ 100 ಕ್ಕೆ ಇಳಿದಿದೆ.

15 ಶಾಸಕರ ರಾಜೀನಾಮೆಯಿಂದ ವಿಧಾನಸಭೆಯ ಬಲಾಬಲ 224ರಿಂದ 209ಕ್ಕೆ ಇಳಿದಂತಾಗಿದೆ. ಒಟ್ಟು 209 ಸದಸ್ಯ ಬಲವನ್ನು ಲೆಕ್ಕ ಹಾಕಿದರೆ ಬಹುಮತಕ್ಕೆ 105 ಸದಸ್ಯರು ಸಾಕಾಗುತ್ತದೆ. ಬಿಜೆಪಿ ಈಗ 105 ಸದಸ್ಯರನ್ನು ಹೊಂದಿದ್ದು. ಬಹುಮತ ಪಡೆದಿದೆ. ಜತೆಗೆ ಬಿಜೆಪಿಗೆ ಪಕ್ಷೇತರ ಶಾಸಕರು ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಬಿಜೆಪಿಯ ಒಟ್ಟು ಬಲ ಈಗ 107. ಈ ಸಂಖ್ಯಾಬಲವನ್ನು ಲೆಕ್ಕಕ್ಕೆ ಇಟ್ಟುಕೊಂಡರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಗೆಲ್ಲುವುದು ಕಷ್ಟ.


ಸಂಬಂಧಿತ ಟ್ಯಾಗ್ಗಳು

Session Government Crisis H D Kumaraswamy MLA Resignation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ