ಬಹುಮತಯಾಚನೆಯ ನಾಟಕ : ಶೋಭಾಕರಂದ್ಲಾಜೆ

Shobha Karandlaje Statement

17-07-2019

ಬೆಂಗಳೂರು: ನಾಳೆ ನಡೆಯುತ್ತಿರುವ ವಿಶ್ವಾಸಮತ ಯಾಚನೆಯ ಅಧಿವೇಶನಕ್ಕೆ 15 ಮಂದಿ ಶಾಸಕರು ಗೈರಾಗುತ್ತೇವೆ ಎಂದು ಹೇಳಿದ್ದಾರೆ. ಹೀಗಿದ್ದರೂ ಬಹುಮತ ಸಾಬೀತು ಮಾಡುವ ಪ್ರಹಸನವನ್ನು ಸಿಎಂ ಅವರು ಮಾಡುತ್ತಿದ್ದಾರೆ ಎಂದು ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ನಿಂದ ಶಾಸಕರಿಗೆ ಜಯ ಸಿಕ್ಕಿದ್ದು, ಈ ತೀರ್ಪು ದೇಶಕ್ಕೆ ಅನ್ವಯವಾಗಲಿದೆ ಎಂದು ವಿಶ್ಲೇಷಿಸಿದರು. ಸದನಕ್ಕೆ ಹೋಗುವುದು ಶಾಸಕರ ಅಭಿಪ್ರಾಯಕ್ಕೆ ಬಿಡಲಾಗಿದ್ದು, ರಾಜೀನಾಮೆ ನೀಡಲು ಅವರಿಗೆ ಸ್ವಾತಂತ್ರ್ಯ ಇದೆ. ಇದು ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಅನ್ವಯವಾಗಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Shobha Karandlaje HD Kumaraswamy MP Rebel MLAs


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ