ಅಧಿವೇಶನಕ್ಕೆ ಈ ಶಾಸಕರು ಹಾಜರಾಗುವುದಿಲ್ಲವಂತೆ!

Rebel MLAs statement

17-07-2019

ಮುಂಬೈ: ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಾವು ನಮ್ಮ ನಿರ್ಧಾರಕ್ಕೆ ಬದ್ಧ. ಅಧಿವೇಶನಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ ಎಂದು ಮುಂಬೈನ ರೆಸಾರ್ಟ್‍ನಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಬಂಡಾಯ ಶಾಸಕರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಜಂಟಿ ಹೇಳಿಕೆ ನೀಡಿದ ಬಂಡಾಯ ಶಾಸಕರು, ವಿಶ್ವಾಸಮತ ಯಾಚನೆ ವೇಳೆ ತಾವು ಹಾಜರಾಗುವುದಿಲ್ಲ ಎಂದು ಹೇಳಿದರು.

ಮುನಿರತ್ನ, ಭೈರತಿ ಬಸವರಾಜು, ಮಹೇಶ್ ಕುಮಠಳ್ಳಿ, ಎಚ್.ವಿಶ್ವನಾಥ್, ಎಂಟಿಬಿ ನಾಗರಾಜು, ಎಸ್ ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಬಿ ಸಿ ಪಾಟೀಲ್ ಸೇರಿದಂತೆ ಒಟ್ಟು 13 ಶಾಸಕರು ಸದ್ಯಕ್ಕೆ ರೆಸಾರ್ಟ್‍ನಲ್ಲೇ ಬೀಡು ಬಿಟ್ಟಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Supreme Court MLA Resignation Rebel MLA Karnataka Crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ