ಶಾಸಕರಿಗೆ ಕೋರ್ಟ್ ಸ್ವಾತಂತ್ರ್ಯ ನೀಡಿದೆ: ಮುಕುಲ್ ರೋಹಟಗಿ

Mukul Rohatgi statement

17-07-2019

ದೆಹಲಿ: ನಾಳೆ ನಡೆಯಲಿರುವ ವಿಶ್ವಾಸಮತವನ್ನು ಗಮನದಲ್ಲಿಟ್ಟುಕೊಂಡು, 15 ಶಾಸಕರು ಭಾಗವಹಿಸಲು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಹೇಳಿದರು. ಎಲ್ಲ 15 ಶಾಸಕರಿಗೆ ನಾಳಿನ ವಿಶ್ವಾಮತ ಯಾಚನೆ ವೇಳೆ ಹಾಜರಾಗಬೇಕೋ ಅಥವಾ ಬೇಡವೋ ಎಂಬ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅರ್ಜಿಯ ವಿಚಾರಣೆಯನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಕೋರ್ಟ್ ಹೇಳಿದೆ ಎಂದರು.

ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿ ಭಾಗವಹಿಸುವಂತೆ ಮೂರು ಸಾಲಿನ ವಿಪ್ ಅನ್ನು ಬಂಡಾಯ ಶಾಸಕರಿಗೆ ನೀಡಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ತೀರ್ಪಿನಿಂದ ಇದಕ್ಕೆ ಮಾನ್ಯತೆ ಇಲ್ಲವಾಗಿದೆ. ಜೊತೆಗೆ, ಸ್ಪೀಕರ್ ಅವರಿಗೆ ಶಾಸಕರ ರಾಜೀನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಮಯವನ್ನು ನೀಡಲಾಗಿದೆ. ಅವರು ಯಾವಾಗ ಬೇಕಾದರೂ ಈ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Supreme Court MLA Resignation Rebel MLA Mukul Rohatgi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ