ಪತ್ರಿಕೋದ್ಯಮದಲ್ಲಿ ಆರ್ಥಿಕ ಸಂಕಷ್ಟ!

Kannada Journalism

16-07-2019

ಇತ್ತೀಚಿನ ವರ್ಷಗಳಲ್ಲಿ ನಾಯಿಕೊಡೆಗಳಂತೆ ಚಾನೆಲ್ ಗಳು ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಸಾಕಷ್ಟು ಟಿಆರ್ ಪಿ ಇಲ್ಲದೆಯೋ ಅಥವಾ ಆರ್ಥಿಕ ಸಂಕಷ್ಟದಿಂದಲೋ ಮುಚ್ಚಿ ಹೋಗುತ್ತವೆ. ಆದರೆ ಸುದ್ದಿ ಪತ್ರಿಕೆಗಳು ಹಾಗಲ್ಲವೆಂದು ಭಾವಿಸಲಾಗಿತ್ತು. ಮೊದಲಿನಿಂದಲೂ ಪ್ರತಿಷ್ಠಿತ ದಿನಪತ್ರಿಕೆಗಳಿಗೆ ಅದರದೇ ಆದ ತೂಕವಿದೆ. ಆದರೆ ಇಂದು ಅಂಥ ದಿನಪತ್ರಿಕೆಗಳಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ.

ಕನ್ನಡದಲ್ಲಿ ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಕನ್ನಡ ಪ್ರಭ, ವಿಜಯವಾಣಿ ಹೀಗೆ ನಂಬಲರ್ಹವಾದ, ಪ್ರತಿಷ್ಠಿತ ದಿನಪತ್ರಿಕೆಗಳಿವೆ. ಆದರೆ ಇದರಲ್ಲೂ ಕೆಲ ಪತ್ರಿಕೆಗಳು ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿವೆ ಎನ್ನಲಾಗಿದೆ. ಅದರಲ್ಲೂ ವಿಶ್ವವಾಣಿ ದಿನಪತ್ರಿಕೆಯಂತೂ ತೀರಾ ಸಂಕಷ್ಟ ಎದುರಿಸುತ್ತಿದೆ ಎನ್ನಲಾಗಿದೆ.

ಆದರೆ ಆಶ್ಚರ್ಯವೆಂಬಂತೆ ಕನ್ನಡದ ಅತ್ಯಂತ ಪ್ರಸಿದ್ಧ ದಿನಪತ್ರಿಕೆಗಳಾದ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಆದಾಯ ಕೂಡ ಇಳಿಕೆಯಾಗಿದೆಯಂತೆ. ಕಳೆದ ಒಂದು ವರ್ಷದಲ್ಲಿ ಶೇ.15 ರಷ್ಟು ಆದಾಯದಲ್ಲಿ ಇಳಿಕೆಯಾಗಿದ್ದು, ಒಂದು ಅಂದಾಜಿನ ಪ್ರಕಾರ ಕೋಟ್ಯಂತರ ರೂ ನಷ್ಟವಾಗಿದೆ ಎನ್ನಲಾಗಿದೆ.

ಇದಕ್ಕೆ ಪ್ರಮುಖ ಕಾರಣ ಜಾಹೀರಾತು ಇಳಿಕೆಯಾಗಿದ್ದು, ಅದರಿಂದ ಬರುವ ಆದಾಯ ಕಡಿಮೆಯಾಗಿದೆ ಹಾಗೂ ಮುದ್ರಣ ದರ ಏರಿಕೆಯಾಗಿರುವುದು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ನಂಥ ಪತ್ರಿಕೆಗಳಲ್ಲೇ ಆದಾಯ ಇಳಿಕೆಯಾದರೆ ಇತರ ಪತ್ರಿಕೆಗಳ ಗತಿಯೇನು? ಅಲ್ಲದೇ ಕನ್ನಡ ಪತ್ರಿಕೋದ್ಯಮದ ಭವಿಷ್ಯವೇನು ಎಂಬ ಬಗ್ಗೆ ಪ್ರಜ್ಞಾವಂತರು ಚಿಂತಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Journalism News paper Kannada Prajavani


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ