ಪಕ್ಷದ ನಾಯಕರಿಗೆ ಡಿಕೆಶಿ ತಿರುಗೇಟು!

DK Shivkumar Statement

16-07-2019

ಶಾಸಕರ ಸಾಲು ಸಾಲು ರಾಜೀನಾಮೆಯಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರ ಪತನದಂಚಿಗೆ ತಲುಪಿದೆ. ಆದರೆ ಸರ್ಕಾರ ಉಳಿಸಲು ಯಾವ ಕಾಂಗ್ರೆಸ್ ಹಿರಿಯ ನಾಯಕರೂ ಪ್ರಯತ್ನಿಸುತ್ತಿಲ್ಲ. ಈ ವಿಷಯದಲ್ಲಿ ಎಲ್ಲರೂ ನಿರಾಸಕ್ತಿ ತೋರಿಸುತ್ತಿದ್ದಾರೆಂಬುದೇ ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದೆ.

ಈ ಮಧ್ಯೆ ಕಾಂಗ್ರೆಸ್ ಪ್ರಮುಖ, ಸಚಿವ ಡಿಕೆ ಶಿವಕುಮಾರ್ ಮಾತ್ರ ಸರ್ಕಾರ ಉಳಿಸುವ ವಿಚಾರದಲ್ಲಿ ಶಕ್ತಿಮೀರಿ ಪ್ರಯತ್ನ ಪಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಡಿಕೆಶಿಗೆ ಮಾತ್ರ ಸರ್ಕಾರ ಉಳಿಸುವ ಹಂಬಲ ಇದೆ ಎಂಬ ವಿಚಾರವೇ ಹಲವರ ಬಾಯಿಗೆ ಆಹಾರವಾಗಿತ್ತು.

ಈ ಆರೋಪಕ್ಕೆ ಶಿವಕುಮಾರ್ ಸಮರ್ಥನೆ ನೀಡಿದ್ದಾರೆ. ಸರ್ಕಾರ ರಚನೆಯಾದಾಗಿನಿಂದ ಲಾಭ ಪಡೆದವರು ಸರ್ಕಾರ ಉಳಿಸಲು ಅಷ್ಟಾದರೂ ಪ್ರಯತ್ನ ಪಡದಿದ್ದರೆ ಅದು ಎಂಥ ನಿಯತ್ತು ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಉಳಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅದರಲ್ಲಿ ತಪ್ಪೇನು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

DK Shivkumar Government crisis Congress MLA Resignation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ