ಕಬ್ಬಿನ ಹಾಲು ಕುಡಿದರೆ ತೂಕ ಇಳಿಕೆ ಸಾಧ್ಯವಾ?

 Did you know sugarcane juice can help you lose weight?

16-07-2019

ತೂಕ ಇಳಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು ಅನೇಕರು ಕಬ್ಬಿನ ಹಾಲು ಕುಡಿಯೋಕೆ ಹಿಂದೆ ಮುಂದೆ ನೋಡ್ತಾರೆ. ಯಾಕೆಂದರೆ ಕಬ್ಬಿನ ರಸ ಸಿಹಿಯಾಗಿರೋದ್ರಿಂದ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಪ್ರಮಾಣವಿರುತ್ತೆ ಅನ್ನೋ ಕಾರಣದಿಂದ. ಆದರೆ ಈ ಭಾವನೆ ತಪ್ಪು. ಕಬ್ಬಿನ ಹಾಲಿನಲ್ಲಿರುವುದು ನೈಸರ್ಗಿಕ ಸಕ್ಕರೆ. ಇದು ಕಡಿಮೆ ಕ್ಯಾಲರಿ ಹೊಂದಿರುವುದರಿಂದ ತೂಕ ಇಳಿಕೆಗೆ ಅತ್ಯಂತ ಪ್ರಯೋಜನಕಾರಿ. 300 ಎಂಎಲ್ ಕಬ್ಬಿನ ಹಾಲಿನಲ್ಲಿ ಕೇವಲ 111 ಕ್ಯಾಲರಿಗಳಿರುತ್ತವೆ. ಅಲ್ಲದೇ ಇದರಲ್ಲಿ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಇರೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು.

ಇನ್ನು ಕಬ್ಬಿನ ಹಾಲಿನಿಂದ ಸಾಕಷ್ಟು ಪ್ರಯೋಜನಗಳಿವೆ.

ಕಬ್ಬಿನ ಹಾಲು ಜೀರೋ ಫ್ಯಾಟ್ ಹೊಂದಿರುತ್ತದೆ.

ಚಯಾಪಚಯ ಕ್ರಿಯೆಯನ್ನು ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು.

ಮೊಡವೆಗಳನ್ನು ಬರದಂತೆ ತಡೆಯಬಹುದು.

ಬಾಯಿಯ ದುರ್ವಾಸನೆ ಹಾಗೂ ಹಲ್ಲಿನ ಹುಳುಕುಗಳಿಂದ ರಕ್ಷಣೆ.

ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Sugarcane Health lose weight Diet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ