ದೇವೇಗೌಡರ ನಿವಾಸದಲ್ಲಿ ವಿಶೇಷ ಪೂಜೆ

Special pooja at HD Devegowda’s house

16-07-2019

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ವಿದ್ಯಮಾನಗಳು ನಡೆಯುತ್ತಿದ್ದು, ಸರ್ಕಾರ ಪತನ ಹೊಂದುವ ಭೀತಿಗೆ ಸಿಲುಕಿದೆ. ಈ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸರ್ಕಾರದ ಉಳಿವಿಗೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದೆ. ಚಂದ್ರ ಗ್ರಹಣದ ಹೊತ್ತಲ್ಲಿ ಏನಾದರೂ ಪವಾಡ ನಡೆಯಬಹುದು ಅನ್ನೋ ಆಸೆಯಲ್ಲಿ ಸಿಎಂ ಇದ್ದಾರೆ.

ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಸಿಎಂ ಅವರ ಜೆಪಿ ನಗರ ನಿವಾಸ ಹಾಗೂ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಪ್ರತಿ ಅಮಾವಾಸ್ಯೆ, ಪೌರ್ಣಮೆ, ಶುಭ ದಿನದಲ್ಲಿ ಗೌಡರ ಕುಟುಂಬ ದೇವರ ಮೊರೆ ಹೋಗುತ್ತಾರೆ. ಆದರೆ ಈ ಬಾರಿ ಚಂದ್ರ ಗ್ರಹಣದಲ್ಲಿ ಸರ್ಕಾರದ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ತಡೆಯಲು ದೇವರ ಮೊರೆ ಹೋಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

HD Devegowda Eclipse HD Kumaraswamy Karnataka CM


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ