ಅಧಿಕಾರಕ್ಕಾಗಿ ಯಡಿಯೂರಪ್ಪ ಅತಿರುದ್ರ ಯಾಗ

B S Yediyurappa

16-07-2019

ಬೆಂಗಳೂರು: ಯಾವುದೇ ಗೊಂದಲವಿಲ್ಲದೆ ಆಡಳಿತ ನಡೆಸುವಂತಾಗಬೇಕು‌. ಮುಖ್ಯಮಂತ್ರಿಯಾಗಲು ಇರುವ‌ ಆತಂಕ ನಿವಾರಣೆಯಾಗಲಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮಹಾರುದ್ರಯಾಗ ನಡೆಸಿದ್ದಾರೆ. ಚಂದ್ರಗ್ರಹಣ ಹಿನ್ನೆಲೆ ಹಾಗೂ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಮಹಾಯಜ್ಞ ಮಾಡಿದ್ದಾರೆ. ಸಿಎಂ ಗದ್ದುಗೆ ಏರುವ ಕನಸು ಕಾಣುತ್ತಿರುವ ಯಡಿಯೂರಪ್ಪನವರು ಬುಧವಾರ ಮಹಾ ರುದ್ರಯಾಗವನ್ನು ನಡೆಸಲಿದ್ದಾರೆ.

ಬೆಂಗಳೂರಿನ ಗವಿಗಂಗಾಧರ ದೇಗುಲದಲ್ಲಿ ಈಗಾಗಲೇ ಮಹಾರುದ್ರಯಾಗಕ್ಕೆ ಸಿದ್ಧತೆ ನಡೆಸುವಂತೆ ಬಿಎಸ್‍ವೈ ಸೂಚಿಸಿದ್ದು, ದೇಗುಲದಲ್ಲಿ ಅಧಿಕಾರ ಸಿದ್ಧಿಯ ಮಹಾ ಯಜ್ಞಕ್ಕೆ ಸಜ್ಜಾಗಿದೆ. ಇನ್ನು ಬುಧವಾರ ಬಿಎಸ್‍ವೈ ಮಹಾರುದ್ರ ಯಾಗ ನಡೆಸಲು ಕಾರಣ ಗ್ರಹಣ ದೋಷ ನಿವಾರಣೆ ಅಂತಾನೂ ಹೇಳಲಾಗುತ್ತಿದೆ. ಮಂಗಳವಾರ ಗ್ರಹಣ ವಿರೋದ್ರಿಂದ ಯಡಿಯೂರಪ್ಪನವರಿಗೆ ಸಾಡೇಸಾತ್ ಮುಗಿಯುತ್ತೆ, ಹೀಗಾಗಿ ಗುರುವಾರ ದೋಸ್ತಿ ಮುರಿದು ಸರ್ಕಾರ ಪತನವಾಗಲು ಬಿಎಸ್‍ವೈ ಶಿವನ ಮೊರೆ ಹೋಗಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

B S Yediyurappa Karnataka CM Eclipse HD Kumaraswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ