ಮೈಸೂರಿನಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ !

Kannada News

12-06-2017 231

ಮೈಸೂರು:- ಮೈಸೂರಿನಲ್ಲಿ‌ ಜಿಟಿ ಜಿಟಿ ಮಳೆಯೊಂದಿಗೆ ಆರಂಭವಾದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ಎಂದಿನಂತಿರುವ ಸಾಮಾನ್ಯ ಜನಜೀವನ. ರಸ್ತೆಗಳಿದು ಸಂಚಾರ ಆಂಭಿಸಿರುವ ಸಾರಿಗೆ ಬಸ್ ಗಳು. ಮತ್ತು ರೈಲುಗಳ ಓಡಾಟ ಸಾಮಾನ್ಯವಾಗಿದೆ, ಹಾಗೂ ಕೇಂದ್ರ ಬಸ್‌ನಿಲ್ದಾಣದಿಂದಲೂ ಬಸ್ ಗಳ ಸಂಚಾರ ಆರಂಭವಾಗಿದೆ. ಲಭ್ಯವಾಗುತ್ತಿರುವ ಹಾಲು, ಪೇಪರ್. ಮಾರುಕಟ್ಟೆಯಲ್ಲಿ ಮುಂದುವರೆದಿರುವ ತರಕಾರಿ ವ್ಯಾಪಾರ. ಆಯಕಟ್ಟಿನ ಸ್ಥಳಗಳಲ್ಲಿ ಮಾತ್ರ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಮೈಸೂರಿನಲ್ಲಿಯೂ ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ರಸ್ತೆಗಿಳಿದಿರುವ ಆಟೋ, ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಮಾರುಕಟ್ಟೆಯಲ್ಲಿ ಪ್ರತಿನಿತ್ಯದಂತೆ ಸಾಗಿರುವ ವ್ಯಾಪಾರ ವಹಿವಾಟು. ಒಟ್ಟಾರೆಯಾಗಿ ಕರ್ನಾಟಕ ಬಂದ್ ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ