ರೋಷನ್ ಬೇಗ್ ಗೆ ಎಸ್.ಐ.ಟಿ.ಗ್ರಿಲ್

SIT investigating Roshan baig regarding IMA Jewels Cheating case

16-07-2019

ಬೆಂಗಳೂರು: ಅಧಿಕ ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಗೆ ನೂರಾರು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಶಿವಾಜಿನಗರ ನಗರದ ಶಾಸಕ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ರೋಷನ್ ಬೇಗ್ ಅವರನ್ನು ವಿಶೇಷ ತನಿಖಾ ತಂಡ ( ಎಸ್ ಐಟಿ) ವಶಕ್ಕೆ ಪಡೆದುಕೊಂಡಿದೆ.

ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿದ ಎಸ್‍ಐಟಿ, ರೋಷನ್ ಬೇಗ್‍ರನ್ನು ವಶಕ್ಕೆ ತೆಗೆದುಕೊಂಡಿದೆ. ಮುಂಬೈಗೆ ಹೊರಟಿದ್ದ ರೋಷನ್ ಬೇಗ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ ಐಟಿ ತನಿಈ ಖಾಧಿಕಾರಿ ಗಿರೀಶ್ ನೇತೃತ್ವದ ತಂಡ ಬಂಧಿಸಿದೆ. ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೀಡಿದ್ದ ಮೊದಲು ಮತ್ತು ಎರಡನೇ ನೋಟಿಸ್​ಗೆ ಶಾಸಕ ರೋಷನ್ ಬೇಗ್ ಸ್ಪಂದಿಸಿರಲಿಲ್ಲ.

ಸದ್ಯ ಎಸ್‍ಐಟಿ ವಶದಲ್ಲಿರುವ ರೋಷನ್ ಬೇಗ್ ಅವರನ್ನು ಸತತ ವಿಚಾರಣೆಗೊಳಪಡಿಸಲಾಗುತ್ತಿದೆ.

ಮಧ್ಯರಾತ್ರಿ ನೀವು ಹೊರಟಿದ್ದಾದ್ರೂ ಎಲ್ಲಿಗೆ, ದೇಶ ಬಿಡುವ ಯೋಚನೆ ಮಾಡಿದ್ರಾ, ವಿಶೇಷ ವಿಮಾನವನ್ನು ಬುಕ್ ಮಾಡಿದ್ದು ಯಾರು, ನೀವೇ ಮಾಡಿದ್ರಾ ಅಥವಾ ಬೇರೆಯವರು ಮಾಡಿದ್ರಾ ಹೀಗೆ ಸರಣಿ ಪ್ರಶ್ನೆಗಳನ್ನು ಹಾಕಲಾಗಿದೆ.

ಐಎಮ್ ಎ ಗೆ ಸೇರಿದ ಬ್ಯಾಂಕ್ ಖಾತೆಗಳಿಂದ ನಿಮಗೆ ಕೋಟ್ಯಂತರ ರೂಪಾಯಿ ಹಣ ಜಮಾವಣೆಯಾಗಿದೆ. ಇದಕ್ಕೆ ನಿಮ್ಮ ಉತ್ತರವೇನು ಎಂದು ಎಸ್‍ಐಟಿ ಕೇಳಿದಾಗ, ನನ್ನ ಪತ್ರಿಕೆಗೆ ಸಂಬಂಧ ಪಟ್ಟಂತೆ ಹಣ ವ್ಯವಹಾರ ಆಗಿರಬಹುದು ಎಂದು ಹೇಳಿದ್ದಾರೆ. ನಿಮ್ಮ ಮಗನ ಮದುವೆಗೆ ಚಾರ್ಟೆಡ್ ಫ್ಲೈಟ್ ಮನ್ಸೂರ್ ಬುಕ್ ಮಾಡಿದ್ರಾ ಎಂಬ ಎಸ್‍ಐಟಿ ಪ್ರಶ್ನೆಗೆ ಉತ್ತರಿಸಿದ ಬೇಗ್, ನನಗೆ ಸರಿಯಾಗಿ ನೆನಪಿಲ್ಲ ಸಾಕಷ್ಟು ವರ್ಷಗಳಾಗಿವೆ ಎಂದಿದ್ದಾರೆ. ಮನ್ಸೂರ್ ಫ್ಲೈಟ್ ಬುಕ್ ಮಾಡಿರೋದಕ್ಕೆ ದಾಖಲೆಗಳಿವೆ ಎಂದು ಎಸ್‍ಐಟಿ ಕೇಳಿದ್ದಕ್ಕೆ ಸ್ನೇಹದಿಂದ ಫ್ಲೈಟ್ ಬುಕ್ ಮಾಡಿರಬಹುದು ಎಂದು ಉತ್ತರಿಸಿದ್ದಾರೆ.

ಎಸ್‍ಐಟಿ ಕೇಳುತ್ತಿರುವ ಪ್ರಶ್ನೆಗಳಿಗಿಗೆ ನನಗೆ ಗೊತ್ತಿಲ್ಲ ಎಂದು ಬೇಗ್ ಹೇಳುತ್ತಿದ್ದಾರೆ. ನಿಮಗೆ ಐಎಂಎ ಮಾಲೀಕ ಮನ್ಸೂರ್ ಖಾನ್ ಗೊತ್ತಾ, ಮನ್ಸೂರ್ ಖಾನ್ ಜೊತೆ ಹಣಕಾಸು ವ್ಯವಹಾರ ಹೊಂದಿದ್ರಾ, ಮನ್ಸೂರ್ ಖಾನ್ ಮಾಡಿದ ಆರೋಪದ ಬಗ್ಗೆ ಏನ್ ಹೇಳ್ತೀರಾ ಎಂಬ ಪ್ರಶ್ನೆಗಳು ಎಸ್‍ಐಟಿ ಬೇಗ್ ಮುಂದಿಟ್ಟಿದೆ. ಆದರೆ ಇದಕ್ಕೆ ಉತ್ತರಿಸಿರುವ ಬೇಗ್ ನನಗೆ ಗೊತ್ತಿಲ್ಲ ಎಂದಿದ್ದಾರೆ ಎನ್ನಲಾಗುತ್ತದೆ.

 


ಸಂಬಂಧಿತ ಟ್ಯಾಗ್ಗಳು

Roshan baig Mansoor khan IMA Jewels SIT


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ