ಗುರುವಾರ ವಿಶ್ವಾಸಮತ ಯಾಚನೆ

Karnataka Crisis

16-07-2019

ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಪತನದ ಭೀತಿಯನ್ನೆದುರಿಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸಲು ಗುರುವಾರ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ.

ಶಾಸಕರ ರಾಜೀನಾಮೆಯಿಂದ ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಾಗಿ ಅದಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ. ಸದನ ಕಲಾಪವನ್ನು ನಡೆಸುವ ಅರ್ಹತೆಯಿಲ್ಲ ಎಂದು ವಿಧಾನಮಂಡಲದಲ್ಲಿ ಪ್ರತಿಭಟಿಸಲು ಪ್ರತಿಪಕ್ಷ ಬಿಜೆಪಿ ಕೈಗೊಂಡ ನಿರ್ಣಯದ ಹಿನ್ನೆಲೆಯಲ್ಲಿ ನಡೆದ ಸದನ ಸಲಹಾ ಸಮಿತಿ ಸಭೆಯ ನಂತರ ಸ್ಪೀಕರ್ ರಮೇಶ್‍ಕುಮಾರ್ ವಿಧಾನಸಭೆಯಲ್ಲಿ ಈ ವಿಷಯ ಪ್ರಕಟಿಸಿದರು.

ಸದನ ಸಲಹಾ ಸಮಿತಿಯಲ್ಲಿ ಆಡಳಿತಾರೂಢ ಪಕ್ಷದ ನಾಯಕರು, ಪ್ರತಿಪಕ್ಷದ ನಾಯಕರ ಜತೆ ಸುದೀರ್ಘ ಚರ್ಚೆ ನಡೆಸಿದ ಸ್ಪೀಕರ್ ರಮೇಶ್‍ಕುಮಾರ್‍, ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವಾಸ ಮತಯಾಚಿಸಲಿದ್ದಾರೆ ಎಂದು ಹೇಳಿದರು.

ಈ ಮಧ್ಯೆ ಗುರುವಾರದಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ ಭಾರೀ ರಾಜಕೀಯ ಹೈಡ್ರಾಮಾ ಆರಂಭವಾಗಿದ್ದು, ಸರ್ಕಾರ ಉರುಳಿಯೇ ಉರುಳುತ್ತದೆ ಎಂಬ ವಿಶ್ವಾಸ ಬಿಜೆಪಿಯಲ್ಲಿದ್ದರೆ, ಕೊನೆ ಘಳಿಗೆಯಲ್ಲಿ ನಡೆಯುವ ಅನಿರೀಕ್ಷಿತ ಬೆಳವಣಿಗೆಯಿಂದ ಸರ್ಕಾರ ಉಳಿಯುತ್ತದೆ ಕಾದು ನೋಡಿ ಎಂದು ಸಿಎಂ ಕುಮಾರಸ್ವಾಮಿತಮ್ಮಆಪ್ತರಿಗೆ ಹೇಳಿರುವುದು ವ್ಯಾಪಕಕುತೂಹಲಕ್ಕೆಕಾರಣವಾಗಿದೆ.

ರಾಜೀನಾಮೆ ನೀಡಿದ ಶಾಸಕರ ಪೈಕಿ ಹಲವರು ಮರಳಿ ಬಂದು ತಮ್ಮರಾಜೀನಾಮೆಯನ್ನು ಹಿಂಪಡೆಯಲಿದ್ದಾರೆಯೇ? ಅಥವಾ ಬಿಜೆಪಿಯ ಶಾಸಕರ ಪೈಕಿ ಕೆಲವರು ಕೊನೇ ಘಳಿಗೆಯಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಬೆಂಬಲಿಸಲಿದ್ದಾರೆಯೇ? ಎಂಬುದು ಒಂದು ಕುತೂಹಲ.

ಮತ್ತೊಂದು ಕಡೆರಿವರ್ಸ್‍ ಆಪರೇಷನ್‍ಗೆ ಬಲಿಯಾಗುವ ಭೀತಿ ಹುಟ್ಟಲು ಕಾರಣರಾಗಿದ್ದ ತಮ್ಮ ಪಕ್ಷದ ಕೆಲ ಶಾಸಕರಿಗೆ ಬಿಜೆಪಿ ಬುದ್ಧಿವಾದ ಹೇಳಿದ್ದು ತನ್ನ ಮಾತು ಫಲಿಸಿದೆ ಎಂಬ ವಿಶ್ವಾಸದಲ್ಲಿದೆ. ಇಷ್ಟೆಲ್ಲದರ ನಡುವೆ ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೇ ಕ್ರಮಕೈಗೊಂಡು ತಮಗೆ ತಿಳಿಸುವಂತೆ ಸುಪ್ರೀಂಕೋರ್ಟ್ ಸ್ಪೀಕರ್‍ಗೆ ಮಂಗಳವಾರದ ಡೆಡ್ ಲೈನ್ ನೀಡಿದ್ದು ಈ ಅಂಶವೂ ಮುಂದೇನು?ಎಂಬ ಕುತೂಹಲ ಕೆರಳುವಂತೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

HD Kumaraswamy Karnataka Crisis Session JDS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ