27 ಕೋಟಿ ಜನ ಬಡತನದಿಂದ ಮೇಲೆ ಬಂದಿದ್ದಾರೆ : ವಿಶ್ವಸಂಸ್ಥೆ

United Nation’s Poverty Report

15-07-2019

ದೇಶದ ಬಡತನ ರೇಖೆಗಿಂತ ಕೆಳಗಿದ್ದ ಜನಸಂಖ್ಯೆಯಲ್ಲಿ 27.1 ಕೋಟಿ ಮಂದಿ ಬಡತನ ರೇಖೆ ದಾಟಿ ಹೊರಬಂದಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದ ಒಟ್ಟು ಜನಸಂಖ್ಯೆಯಲ್ಲಿ 27.1 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ. ದೇಶದಲ್ಲಿ ಪಡಿತರ ಬೇಡಿಕೆ ಮತ್ತು ಸರಬರಾಜಿನ ನಡುವೆ ತೀವ್ರ ಅಂತರವಿದ್ದು, ಬಡ ಕುಟುಂಬಗಳಿಗೆ ನಿರ್ದಿಷ್ಟ ಪ್ರಮಾಣದ ಪಡಿತರಗಳು ದೊರೆಯುತ್ತಿಲ್ಲ ಎನ್ನುವುದನ್ನು 2019ರ ವಿಶ್ವಸಂಸ್ಥೆ ಬಹು ಆಯಾಮ ಬಡತನ ಸೂಚಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಡ ಜನರ ಬದುಕು ಸುಧಾರಣೆಯಾಗಿದೆ. ಆದರೆ ಬಡತನ ಸುಧಾರಣೆ ಕುರಿತಂತೆ, ವಿಶ್ವಸಂಸ್ಥೆ ನೀಡಿರುವ ವರದಿಯನ್ನು ಆಹಾರ ಹಕ್ಕು ಹೋರಾಟಗಾರರು ನಿರಾಕರಿಸಿದ್ದಾರೆ. ಜಾರ್ಖಂಡ್‍ನಲ್ಲಿ ಬಡತನ, ಪಡಿತರ, ಹಂಚಿಕೆ ವ್ಯವಸ್ಥೆಯನ್ನು ಅಲ್ಲಗಳೆದಿದ್ದಾರೆ. ಸರ್ಕಾರ ವಾಸ್ತವ ಸ್ಥಿತಿಯನ್ನು ಅರಿತಿಲ್ಲ, ದೇಶದಲ್ಲಿ ಹಸಿವಿನಿಂದಲೇ ಸಾವು - ನೋವುಗಳು ಸಂಭವಿಸುತ್ತಿವೆ. ಇಂತಹ ವರದಿಗಳು ರಾಜ್ಯದಲ್ಲಿ ಮೇಲಿಂದ ಮೇಲೆ ವರದಿಯಾಗುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಡಿತರ ಹಕ್ಕು ಕುರಿತಂತೆ ಸುಪ್ರೀಂ ಕೋರ್ಟ್ ಸಲಹೆಗಾರ ಬಲರಾಂ ಅವರು, ಹೇಳಿಕೆ ನೀಡಿ ಬಡತನವನ್ನು ಆಯಾ ಸಮುದಾಯದ ಸಮೀಕ್ಷೆ ನಡೆಸಿ, ಬಡತನ ಪ್ರಮಾಣ ಅರಿತುಕೊಳ್ಳಬೇಕಿದೆ ಹಾಗೂ ಬಡತನವನ್ನು ಗುರುತಿಸಬೇಕಿದೆ ಎಂದಿದ್ದಾರೆ.                                                                                                                                                                      2011ರ ಜನಗಣತಿ ಅನ್ವಯ 23.94 ಲಕ್ಷ ಗಿರಿಜನ ಸಮುದಾಯದ ಬಡಜನತೆಯನ್ನು ಗುರುತಿಸಲಾಗಿದ್ದು ಹಾಗೂ ಇವರಿಗೆ ಕೆಂಪು ಬಣ್ಣದ ಪಡಿತರ ಚೀಟಿ ನೀಡಲಾಗಿತ್ತು.

ಕೆಂಪು ಬಣ್ಣದ ಪಡಿತರ ಚೀಟಿಗೆ ಮಾಸಿಕ 35 ಕೆಜಿ ಪಡಿತರ ಧಾನ್ಯ ವಿತರಿಸಲಾಗುತ್ತಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರಡಿ ಅಂದಾಜು 11.44 ಲಕ್ಷ ಬಡಜನರನ್ನು ಗುರುತಿಸಲಾಗಿತ್ತು ಹಾಗೂ ಇವರಿಗೆ ಮಾಸಿಕ 35 ಕೆಜಿ ಪಡಿತರ ಧಾನ್ಯ ಪಡೆಯಲು ಅರ್ಹರೆಂದು ಪರಿಗಣಿಸಲಾಗಿತ್ತು. ಆದರೆ 2013ರ ಆಹಾರ ಭದ್ರತೆ ಕಾಯ್ದೆಗೆ ತಿದ್ದುಪಡಿ ತಂದ ನಂತರ, ಈ ವರ್ಗದ ಜನರಿಗೆ ಪ್ರಸ್ತುತ ಕೇವಲ 5 ಕೆಜಿ ಪಡಿತರ ಮಾತ್ರ ವಿತರಿಸಲಾಗುತ್ತಿದೆ. ಈ ಮೊದಲು ಕುಟುಂಬದ ಸದಸ್ಯರ ಗಣನೆ ಇಲ್ಲದೆ, 35 ಕೆಜಿ ಪಡಿತರ ವಿತರಿಸಲಾಗುತ್ತಿತ್ತು. ನಿಯಮ ತಿದ್ದುಪಡಿಯಾದ ನಂತರ, ನಾಲ್ಕು ಜನರುಳ್ಳ ಕುಟುಂಬಕ್ಕೆ 15 ಕೆಜಿ ಪಡಿತರ ಮಾತ್ರ ಪಡೆದುಕೊಳ್ಳಬಹುದಾಗಿದೆ.

2011 ರಿಂದ ಭಾರತದ ಜನಸಂಖ್ಯೆಯಲ್ಲಿ ಶೇ. 25 ರಷ್ಟು ಹೆಚ್ಚಾಗಿದೆ. ಬಡಜನತೆಗೆ ಸರ್ಕಾರದಿಂದ ವಿವಿಧ ಯೋಜನೆಗಳಡಿ ಸರಬರಾಜು ಮಾಡುತ್ತಿರುವ ಪರಿಸರ ಪ್ರಮಾಣ ಯಥಾವತ್ ಸ್ಥಿತಿಯಲ್ಲಿದೆ. ಆಹಾರ ಸರಬರಾಜು ಹಾಗೂ ಬೇಡಿಕೆಯ ನಡುವೆ ತೀವ್ರ ವ್ಯತ್ಯಾಸವಿದೆ ಎನ್ನಲಾಗಿದೆ. ಇದರೊಂದಿಗೆ ಪಡಿತರ ಚೀಟಿ ಡಿಜಿಟಲೀಕರಣದ ನಂತರ, ಸಾಕಷ್ಟು ಫಲಾನುಭವಿಗಳು ವಂಚನೆಗೊಳಗಾಗುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ಆದರೆ ಈ ವಾದವನ್ನು ತಳ್ಳಿಹಾಕಿರುವ ಜಾರ್ಖಂಡ್‍ನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಸೂರ್ಯ 2016ರ ನಂತರ, ಪಡಿತರ ಚೀಟಿ ಪಡೆಯುವ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಆನ್ ಲೈನ್ ಇರಬಹುದು, ಆಫ್ ಲೈನ್ ಇರಬಹುದು, ಪಡಿತರ ಚೀಟಿ ಪಡೆಯುವಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ ಆಫ್ ಲೈನ್ ವ್ಯವಸ್ಥೆಯಲ್ಲಿ ಸರಬರಾಜು ಅಧಿಕಾರಿಯ ಸಹಿಯ ಅಗತ್ಯವಿದೆ ಎಂದಿದ್ದಾರೆ.

ಉಳಿದಂತೆ, ಕೆಲವು ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಯಾರು ಎರಡು ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದಾರೋ ಅಂತಹವರ ಪಡಿತರ ಚೀಟಿಗಳನ್ನು ಮಾತ್ರ ರದ್ದುಪಡಿಸಲಾಗಿದೆ. ಕೇಂದ್ರ ಸರ್ಕಾರ, ಪಡಿತರ ಚೀಟಿಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಜೋಡಿಸುವಂತೆ ಸೂಚಿಸಿದ ನಂತರ, ಎರಡೆರಡು ಕಾರ್ಡ್‍ಗಳನ್ನು ಪತ್ತೆಹಚ್ಚಿ ರದ್ದುಪಡಿಸಲಾಗಿದೆ ಎಂದಿದ್ದಾರೆ.

ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಫುಡ್ ಬ್ಯಾಂಕ್ ವ್ಯವಸ್ಥೆ ಆರಂಭಿಸಲಾಗಿದೆ. ತಾಂತ್ರಿಕ ದೋಷದಿಂದಾಗಿ ಪಡಿತರ ಚೀಟಿ ಪಡೆಯದ ಕಾರಣ ಪಡಿತರಗಳನ್ನು ಪಡೆಯಲು ಸಾಧ್ಯವಾಗದ ಫಲಾನುಭವಿಗಳಿಗೆ ಪಡಿತರ ಹಂಚಿಕೆ ವ್ಯವಸ್ಥೆ ಕೈಗೊಂಡಿರುವುದಾಗಿಯೂ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Poverty Ration Report United Nations


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ