ಚಂದ್ರಯಾನಕ್ಕೆ ತಾಂತ್ರಿಕ ಅಡ್ಡಿ

Chandrayaan 2 launch called off

15-07-2019

ಬೆಂಗಳೂರು: ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಚಂದ್ರಯಾನ-2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು. ಮುಂಜಾಗರೂಕತೆ ಕ್ರಮವಾಗಿ ಉಡ್ಡಯನವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಹೊಸ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದು ಇಸ್ರೋ ಟ್ವೀಟ್ ಮಾಡಿದೆ. ಚಂದ್ರಯಾನ-2 ಗಗನನೌಕೆಯನ್ನು ಹೊತ್ತ ಬಾಹುಬಲಿ ಹೆಸರಿನ ಬೃಹತ್ ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ 2.40ರ ನಸುಕಿನಲ್ಲಿ ನಭಕ್ಕೆ ಚಿಮ್ಮಬೇಕಿತ್ತು.


ಸಂಬಂಧಿತ ಟ್ಯಾಗ್ಗಳು

Chandrayaan 2 mission Moon ISRO


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ