ಬೀಗ ಮುರಿದು ದರೋಡೆ

Theft

13-07-2019

ಮನೆಯ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, 7 ಸಾವಿರ ನಗದು, ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಸೋಲದೇವನಹಳ್ಳಿಯ ವಿನಾಯಕ ನಗರದ ಆಶ್ರಮ ರಸ್ತೆಯಲ್ಲಿ ನಡೆದಿದೆ.

ವಿನಾಯಕ ನಗರದ ಆಶ್ರಮ ರಸ್ತೆಯ ಚಾಮುಂಡೇಶ್ವರಿ ಅವರು ನಿನ್ನೆ ಸಂಜೆ ಮನೆಗೆ ಬೀಗ ಹಾಕಿಕೊಂಡು ರಾತ್ರಿ 9ರ ವೇಳೆ ವಾಪಸ್ಸಾಗುವಷ್ಟರಲ್ಲಿ ದುಷ್ಕರ್ಮಿಗಳು ಕಳ್ಳತನ ಮಾಡಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಸೋಲದೇವನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Theft Bengaluru Police case Complaint


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ