ವರುಣನ ಅಬ್ಬರಕ್ಕೆ ಉತ್ತರ ಪ್ರದೇಶ ತತ್ತರ

Heavy rain in Uttar Pradesh

13-07-2019

ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇಲ್ಲಿನ 14 ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು ಈ ವಾರದಲ್ಲಿ ನೂರಕ್ಕೂ ಹೆಚ್ಚು ಕಟ್ಟಡಗಳು ಕುಸಿದಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಉನ್ನಾವೋ, ಅಂಬೇಡ್ಕರ್ ನಗರ, ಖಿರಿ, ಕಾನ್‌ಪುರ ನಗರ, ಪಿಲಿಭಿಟ್, ಸೋನಭದ್ರಾ, ಚಂದೋಳಿ, ಫಿರೋಜಾಬಾದ್, ಸುಲ್ತಾನ್‌ಪುರದಲ್ಲಿ ಹೆಚ್ಚಿನ ಅನಾಹುತವಾಗಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ ಐದು ದಿನ ಭಾರಿ ಮಳೆ ಮುಂದುವರೆಯಲಿದೆ. ಉತ್ತರಾಖಂಡ್, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕೊಂಕಣ, ಗೋವಾ, ಕರ್ನಾಟಕ, ಅರುಣಾಚಲಪ್ರದೇಶ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಮ್, ತ್ರಿಪುರದಲ್ಲಿ ಮಳೆಯಾಗಲಿದೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Rain Flood Uttar Pradesh Dead


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Dark mode ನಲ್ಲಿ ಓದಲು ಅವಕಾಶ ಮಾಡಿ. ಬಿಳಿ ಬೆಳಕಿನಿಂದ ಕಣ್ಣುಗಳಿಗೆ ಹೆಚ್ಚು ಹೊತ್ತು ಓದಲು ಸಾಧ್ಯವಾಗುವುದಿಲ್ಲ.
  • Abhishek A Banavane
  • Professional