ಹಣ್ಣಿನ ಜ್ಯೂಸ್ ಕುಡಿಯೋ ಮುನ್ನ ಎಚ್ಚರ!

Sugar in fruit juices may increases risk of cancer: Study

13-07-2019

ಆರೋಗ್ಯ ದೃಷ್ಟಿಯಿಂದ ಹಣ್ಣುಗಳನ್ನು, ಹಣ್ಣಿನ ಜ್ಯೂಸ್ ಕುಡಿಯೋದು ಒಳ್ಳೆಯದು. ಆದರೆ ಹಣ್ಣಿನ ಜ್ಯೂಸ್ ಹೆಚ್ಚಾಗಿ ಕುಡಿದರೆ ಆರೋಗ್ಯ ಹದಗೆಡುತ್ತೆ ಎನ್ನುತ್ತಿದೆ ಹೊಸ ಅಧ್ಯಯನ. ಹೌದು… ಹೆಚ್ಚು ಹೆಚ್ಚು ಹಣ್ಣಿನ ಜ್ಯೂಸ್ ಸೇವಿಸುವುದರಿಂದ ಕ್ಯಾನ್ಸರ್ ಬರೋ ಸಾಧ್ಯತೆ ಇದೆಯಂತೆ.

ಬ್ರಿಟಿಷ್ ಮೆಡಿಕಲ್ ಜರ್ನಲ್ ಒಂದರಲ್ಲಿ ಪ್ರಕಟವಾಗಿರುವ ಲೇಖನದ ಪ್ರಕಾರ ಹಣ್ಣಿನ ರಸಗಳಿಗೆ ಹಾಕುವ ಸಕ್ಕರೆಯಿಂದಾಗಿ ಇಂಥ ಸಮಸ್ಯೆ ಉದ್ಭವಿಸುತ್ತದೆ ಎನ್ನಲಾಗಿದೆ. ಹಣ್ಣಿನ ರಸಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಹಾಕಿರುತ್ತಾರೆ. ಅಷ್ಟೊಂದು ಸಕ್ಕರೆ ನಿಮ್ಮ ದೇಹ ಸೇರುವುದರಿಂದ ಸ್ಥೂಲಕಾಯದ ಸಮಸ್ಯೆ ಉಂಟಾಗುತ್ತದೆ. ಒಬೆಸಿಟಿ ಅನ್ನೋದು ಅನೇಕ ಕಾಯಿಲೆಗಳ ಆರಂಭ. ಹೀಗಾಗಿ ಇದು ಬೇರೆ ಬೇರೆ ತರಹದ ಕ್ಯಾನ್ಸರ್ ಗೂ ಕಾರಣವಾಗಬಹುದು ಎಂದು ಹೇಳಲಾಗಿದೆ. ಸುಮಾರು 42 ವರ್ಷ ವಯಸ್ಸಿನ 1 ಲಕ್ಷಕ್ಕೂ ಹೆಚ್ಚು ಜನರನ್ನು ಅಧ್ಯಯನ ಮಾಡಿ ಈ ಅಂಶವನ್ನು ಪತ್ತೆಹಚ್ಚಲಾಗಿದೆ.


ಸಂಬಂಧಿತ ಟ್ಯಾಗ್ಗಳು

Sugar cancer fruit juice cancer


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ