ಭಾರೀ ಮಳೆಯಿಂದ ತತ್ತರಿಸಿದ ಅಸ್ಸಾಂ

6 Killed, Over 8 Lakh Affected As Flood Situation Worsens In Assam

13-07-2019

ಭಾರೀ ಮಳೆಗೆ ಅಸ್ಸಾಂ ತತ್ತರಿಸಿದೆ. ಧೇಮಜಿ, ಲಕಿಂಪುರ್, ಉತ್ತರ ಅಸ್ಸಾಂ, ಬೊಂಗೈಗಾನ್, ಬರ್ಪೇಟಾ ಮುಂತಾದ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಭಾರೀ ಪ್ರವಾಹ 6 ಜನರನ್ನು ಬಲಿಪಡೆದಿದೆ. ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ.

ಸುಮಾರು 21 ಜಿಲ್ಲೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ. ನಿರಾಶ್ರಿತರಿಗಾಗಿ 68 ಪರಿಹಾರ ಕೇಂದ್ರಗಳನ್ನು ರಚಿಸಲಾಗಿದೆ. ಇನ್ನು ಮನೆ, ಮಠ, ಆಸ್ತಿ ಪಾಸ್ತಿ ಎಲ್ಲವೂ ನೀರುಮಯವಾಗಿದೆ. ಸುಮಾರು 27 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಸಂಪೂರ್ಣ ನಾಶವಾಗಿದೆ.

ಗುವಾಹಟಿಯ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ನೀರು ಅಪಾಯದ ಮಟ್ಟ ತಲುಪುತ್ತಿದೆ. ಜೋರ್ಹತ್‌ನ ನಿಮತಿ ಘಾಟ್‌ನಲ್ಲಿ ನದಿ ಆಗಲೇ ಅಪಾಯದ ಮಟ್ಟ ದಾಟಿದೆ. ಇತರ ನದಿಗಳಾದ ಡಿಖೋವ್, ಧನ್ಸಿರಿ, ಜಿಯಾ ಭಾರಲಿ, ಪುತಿಮರಿ ಮತ್ತು ಬೆಕಿ ಕೂಡ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನವರು ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Assam Rain Flood Water


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ