ತೇಲಿಬಂದ ಬಾಲಕನ ಶವವನ್ನು ಪಾಕ್ ಗೆ ಒಪ್ಪಿಸಿದ ಯೋಧರು

Boy

12-07-2019

ಶ್ರೀನಗರ, ಜು. 12-ದೇಶದ ಗಡಿಯಿಂದ  ಕಿಶನ್ ಗಂಗಾ ನದಿಯಲ್ಲಿ ತೇಲಿಬಂದ 7 ವರ್ಷ ಬಾಲಕನ ಮೃತದೇಹವನ್ನು ಭಾರತದ ಯೋಧರು ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಸೇನಾಧಿಕಾರಿಗಳ ತಂಡ ನೆಲಬಾಂಬ್ ಪ್ರದೇಶದಿಂದ ಬಾಲಕನ ಶವವನ್ನು ಸುರಕ್ಷಿತವಾಗಿ ಗಡಿ ನಿಯಂತ್ರಣಾ ರೇಖೆಗೆ ತಂದು ಪಾಕಿಸ್ತಾನಕ್ಕೆ ಒಪ್ಪಿಸಿದ್ದು ಯೋಧರು, ಅಧಿಕಾರಿಗಳು, ರಾಜಕಾರಣಿಗಳು ಮೃತದೇಹವನ್ನು ಕಂಡು ಮಮ್ಮಲ ಮರುಗಿದ್ದಾರೆ. ಕಳೆದ ಮೂರು ದಿನಗಳಿಂದ ಗಡಿ ನಿಯಂತ್ರಣಾ ರೇಖೆ ಬಳಿ ಬಾಲಕನ ಶವ ಹಸ್ತಾಂತರ ಕುರಿತಂತೆ, ಗಡಿ ಪ್ರದೇಶದ ಗ್ರಾಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಕುರ್ಜ್ ಕಣಿವೆಯ ಅಖುರ ಹಳ್ಳಿ ಜನ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದರು. ಈ ಮಧ್ಯೆ ಭಾರತೀಯ ಸೇನೆ ನದಿಯಲ್ಲಿ ತೇಲಿಬಂದ ಬಾಲಕ ಅಬೀದ್ ಶೇಕ್‍ನ ಶವವನ್ನು ಪಾಕಿಸ್ತಾನಕ್ಕೆ ಒಪ್ಪಿಸಿದೆ.

ಮಾಜಿ ಶಾಸಕ ನಾಜೀರ್ ಅಹಮದ್ ಗುರೇಜಿ ಇಂತಹ ಘಟನೆ ನನ್ನ ಜೀವನದಲ್ಲಿ ಮೊದಲ ಅನುಭವ ಎಂದಿದ್ದಾರೆ. ಕಳೆದ ಮಂಗಳವಾರ ಕಿಶನ್ ಗಂಗಾ ನದಿಯಲ್ಲಿ ಬಾಲಕನ ಶವ ತೇಲಿಬರುತ್ತಿರುವುದನ್ನು ಅಖುರ ಗ್ರಾಮಸ್ಥರು ಗಮನಿಸಿದ್ದರು.

ಬಾಲಕನ ಶವ ಪತ್ತೆಯಾದ ಸುದ್ದಿ ತಿಳಿದ ಪಾಕ್ ಸೇನೆಗೆ ಈ ವಿಷಯ ತಿಳಿಸುವಂತೆ ಸೇನಾಧಿಕಾರಿಗಳಿಗೆ ಬಂಡೀಪೌರ ಜಿಲ್ಲಾಧಿಕಾರಿ ಶಬಾದ್ ಮಿರ್ಜಾ ಸೂಚಿಸಿದ್ದರು.

ಮಾನವೀಯತೆ ದೃಷ್ಟಿಯಿಂದ ಇಂತಹ ನಿರ್ಧಾರ ಕೈಗೊಳ್ಳಲಾಯಿತೆಂದು ಶ್ರೀನಗರದಲ್ಲಿರುವ 15ನೇ ಕಾಪ್ರ್ಸ್‍ನ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ದಿಲ್ಲೋನ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kishan Ganga Pakistan River Indian Soldiers


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ