ವಿಚಾರಣೆಗಾಗಿ ಸೋನಾಕ್ಷಿ ಮನೆಗೆ ಬಂದ ಯುಪಿ ಪೊಲೀಸರು

UP Police visit Sonakshi Sinha

12-07-2019

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಮೋಸದ ಆರೋಪ ಕೇಳಿಬಂದಿದ್ದು ಇದಕ್ಕಾಗಿ ಮುಂಬೈನಲ್ಲಿರುವ ಸೋನಾಕ್ಷಿ ಸಿನ್ಹಾ ಮನೆಗೆ ಉತ್ತರ ಪ್ರದೇಶ ಪೊಲೀಸರು ಬಂದಿದ್ದರೆಂದು ವರದಿಯಾಗಿದೆ.

ಕಳೆದ ವರ್ಷ ಕಾರ್ಯಕ್ರಮವೊಂದಕ್ಕಾಗಿ ಬರೋಬ್ಬರಿ 24 ಲಕ್ಷ ರೂ ಪಡೆದಿದ್ದ ಸೋನಾಕ್ಷಿ ಸಿನ್ಹಾ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅವರಿಂದ ನಮಗೆ ಮೋಸವಾಗಿದೆ ಎಂದು ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಮುಂಬೈಗೆ ಬಂದಿದ್ದರು. ಆದರೆ ನಟಿ ಸೋನಾಕ್ಷಿ ಮನೆಯಲ್ಲಿರದಿದ್ದುದರಿಂದ ಹಾಗೆಯೇ ವಾಪಸ್ ಹೋಗಬೇಕಾಗಿದೆ. ಮತ್ತೆ ಇಂದು ಪೊಲೀಸರು ಆಗಮಿಸುವ ಸಾಧ್ಯತೆ ಇದೆ.

ಈ ಮಧ್ಯೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸೋನಾಕ್ಷಿ ಸಿನ್ಹಾ ವಕ್ತಾರ, ಇದೊಂದು ಸುಳ್ಳು ಆರೋಪ. ಸೋನಾಕ್ಷಿ 9 ವರ್ಷದ ವೃತ್ತಿಯಲ್ಲಿ ಯಾರಿಗೂ ಮೋಸ ಮಾಡಿಲ್ಲ. ಇದರ ಹಿಂದೆ ಏನೋ ಹುನ್ನಾರವಿದೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sonakshi Sinha UP Bollywood Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ