ನೀರನ್ನು ಹೊತ್ತ ಮೊದಲ ರೈಲು ಎಲ್ಲಿಗೆ ಹೊರಟಿದೆ ಗೊತ್ತ?

First train carrying water for Chennai

12-07-2019

ಬರಪೀಡಿಯ ಚೆನ್ನೈಗೆ 25 ಲಕ್ಷ ಲೀಟರ್ ನೀರನ್ನು ಹೊತ್ತ ರೈಲು ಚೆನ್ನೈಗೆ ತೆರಳಲಿದೆ. ಇದಕ್ಕಾಗಿ ತಮಿಳುನಾಡಿದ ವೆಲ್ಲೂರು ಜಿಲ್ಲೆಯ ಜೋಲಾರಪೇಟೆ ರೈಲ್ವೆ ನಿಲ್ದಾಣದಿಂದ ರಾಜಧಾನಿ ಚೆನ್ನೈಗೆ ಹೊರಟಿದೆ. ಈ ರೈಲಿನಲ್ಲಿ ನೀರನ್ನು ತೆಗೆದುಕೊಂಡು ಕುಡಿಯಲೂ ಕೂಡ ನೀರಿಲ್ಲದೇ ಬರಪೀಡಿತವಾದ ಚೆನ್ನೈ ಮಹಾನಗರಕ್ಕೆ ಪೂರೈಸಲಾಗುತ್ತದೆ.

ಜೋಲಾರ್‌ಪೆಟ್ ನಿಲ್ದಾಣದಿಂದ ಹೊರಟಿರುವ ವಿಶೇಷ ರೈಲಿನ ಪ್ರತಿಯೊಂದು ವ್ಯಾಗನ್ 50,000 ಲೀಟರ್ ನೀರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಬಾರಿ ರೈಲಿನಲ್ಲಿ 25 ಲಕ್ಷ ಲೀಟರ್ ನೀರನ್ನು ತರಲಾಗುತ್ತಿದ್ದು, ಪ್ರತಿದಿನ 4 ಬಾರಿ ಈ ರೈಲು ಚೆನ್ನೈಗೆ ನೀರು ಪೂರೈಸುತ್ತದೆ. ಅಲ್ಲದೇ ಒಂದು ಬಾರಿ ರೈಲು ನೀರು ಪೂರೈಸಲು ಸರಿಸುಮಾರು 8 ಲಕ್ಷ 40 ಸಾವಿರ ರೂ ಖರ್ಚಾಗುತ್ತದೆ. ಇದಕ್ಕಾಗಿ ತಮಿಳುನಾಡು ಸರ್ಕಾರ 65 ಕೋಟಿ ರೂ ತೆಗೆದಿರಿಸಿದೆ.

ವಿಶೇಷ ರೈಲು ಗುರುವಾರ ಚೆನ್ನೈಗೆ ತಲುಪಬೇಕಿತ್ತು, ಆದರೆ ರೈಲ್ವೆ ನಿಲ್ದಾಣಕ್ಕೆ ಟ್ಯಾಂಕ್ ಅನ್ನು ಸಂಪರ್ಕಿಸುವ ಕವಾಟಗಳಲ್ಲಿನ ಸೋರಿಕೆಯಿಂದಾಗಿ ಈ ಕಾರ್ಯ ಒಂದು ದಿನ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Chennai water Train Drought


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ