ಕರ್ನಾಟಕ ಬಂದ್: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಕಲ್ಲುತೂರಾಟ !

Kannada News

12-06-2017

ಕೋಲಾರ:- ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸಲು ಮತ್ತು ಕಳಸಾ ಬಂಡೂರಿ ನೀರಾವರಿ ಯೋಜನೆ ಅನುಷ್ಠಾನ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ, ಕೋಲಾರದಲ್ಲಿ ಬಂದ್ ಗೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು, ಪ್ರತಿಭಟನೆಯನ್ನು ಪ್ರೋತ್ಸಾಹಿಸಿ ಪ್ರತಿಭಟನಾಕಾರರು  ಬೀದಿಗಿಳಿದು ಘೋಷಣೆಗಳನ್ನು ಕೂಗುತ್ತಿದ್ದರು, ಮಾಲೂರು ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು ಮತ್ತು ರಸ್ತೆಯಲ್ಲಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶಾಶ್ವತ ನೀರಾವರಿ ಒದಗಿಸಲು ಹಲವು ವರ್ಷಗಳಿಂದ ಕೋಲಾರದಲ್ಲಿ ಹೋರಾಟಗಳು ನಡೆಯಿತ್ತಿದ್ದು, ಇದೀಗ ಪ್ರತೀಭಟನೆಗೆ ಬೆಂಬಲ ಸೂಚಿಸಿ ಬಂದ್ ನಡೆಸುತ್ತಿದ್ದಾರೆ.

 ಶಾಶ್ವತ ನೀರಾವರಿ ಒದಗಿಸಲು ಹಲವು ವರ್ಷಗಳಿಂದ ಕೋಲಾರದಲ್ಲಿ ಹೋರಾಟಗಳು ನಡೆಯಿತ್ತಿದ್ದು, ಇದೀಗ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ