ಅತೃಪ್ತ ಶಾಸಕರಿಗೆ ವಿಪ್ ಜಾರಿ

Session starts from today

12-07-2019

ಇಂದಿನಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತಮ್ಮ ಎಲ್ಲ ಶಾಸಕರಿಗೂ ವಿಪ್ ಜಾರಿ ಮಾಡಿದೆ. ರಾಜೀನಾಮೆ ನೀಡಿರುವ ಶಾಸಕರು ಮುಂಬೈನಲ್ಲಿ ಇರುವುದರಿಂದ ವಿಪ್ ಪ್ರತಿಯನ್ನು ಶಾಸಕರ ಅಧಿಕೃತ ನಿವಾಸದ ಗೋಡೆಗೆ ಅಂಟಿಸಲಾಗಿದೆ. ನಿನ್ನೆಯೆ ಶಾಸಕರ ಭವನದಲ್ಲಿರುವ ಶಾಸಕರ ಕೊಠಡಿ ಮುಂಭಾಗದಲ್ಲಿ ವಿಪ್ ಪ್ರತಿ ಅಂಟಿಸಲಾಗಿದೆ.

ಇನ್ನು ರಾಜಕೀಯ ಅಸ್ಥಿರತೆಯ ಕಾರ್ಮೋಡದ ಮಧ್ಯೆಯೇ ಆರಂಭವಾಗಲಿರುವ ಅಧಿವೇಶನವನ್ನು ಸ್ಪೀಕರ್ ರಮೇಶ್ ಕುಮಾರ್ ಯಾವ ರೀತಿ ಅಧಿವೇಶನವನ್ನು ನಿಭಾಯಿಸಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. ಬಿಜೆಪಿ ನಾಯಕರು ದೋಸ್ತಿ ಸರ್ಕಾರವನ್ನು ಪತನಗೊಳಿಸಿ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ತುದಿಗಾಲ ಮೇಲೆ ನಿಂತಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಇಲ್ಲವೇ ಶಾಸಕರ ಮನವೊಲಿಸಿ ಸರ್ಕಾರವನ್ನು ಮುನ್ನಡೆಸುತ್ತಾರಾ? ಎಂಬ ಕುತೂಹಲ ರಾಜ್ಯದ ಜನರಲ್ಲಿ ಮನೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

Session Ramesh Kumar MLA Government crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ