ಇಬ್ಬರು ಡಕಾಯಿತರ ಬಂಧನ

Arrested

11-07-2019

ವ್ಯಾಪಾರಿಯೊಬ್ಬರಿಂದ 31 ಲಕ್ಷ ರೂಗಳನ್ನು  ದೋಚಿ ಪರಾರಿಯಾಗಿದ್ದ ಇಬ್ಬರು ಡಕಾಯಿತರಲ್ಲಿ ಓರ್ವನಿಗೆ ದೆಹಲಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ದೆಹಲಿ ವಿಶೇಷ ಪೊಲೀಸ್ ತಂಡ ಪೂರ್ವ ದೆಹಲಿಯ ಗಾಜಿಪುರ್ ಮಂಡಿ ಪ್ರದೇಶ ವ್ಯಾಪ್ತಿಯಲ್ಲಿ ಪೊಲೀಸರು ಮತ್ತು ಡಕಾಯಿತರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಡಕಾಯಿತರನ್ನು ಗುಂಡು ಹೊಡೆದು ಬಂಧಿಸಲಾಗಿದೆ.

ನಿನ್ನೆ ರಾತ್ರಿ 8.45ರ ವೇಳೆಗೆ ಈ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದ್ದು, ಎನ್‍ಕೌಂಟರ್ ವೇಳೆ ಓರ್ವ ಡಕಾಯಿತ ಗಾಯಗೊಳಗಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಂಧಿತ ಡಕಾಯಿತನನ್ನು ಭಾಗ್ಪತ್ ನಿವಾಸಿ ಧೂಮ್‍ಸಿಂಗ್ ಹಾಗೂ ಮೀರತ್‍ನ ನಿವಾಸಿ ವಾಸೀಂ ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿ ಸಿಂಗ್ ಅವರ ಮಾಹಿತಿಯನ್ವಯ  ಈ ಇಬ್ಬರೂ ಡಕಾಯಿತರೂ ಸೇರಿದಂತೆ ಒಟ್ಟು ಐವರು ಫೆ. 2 ರಂದು ಬಂದೂಕಿನಿಂದ ಹೆದರಿಸಿ ಅಕ್ಷರಾಧಂ ದೇವಸ್ಥಾನ ಬಳಿ ವ್ಯಾಪಾರಿಯೊಬ್ಬರಿಂದ 31 ಲಕ್ಷ ರೂ.ಗಳನ್ನು ಅಪಹರಿಸಿದ್ದರು. ಈ ಇಬ್ಬರ ಮಾಹಿತಿ ನೀಡಿದವರಿಗೆ ಪೊಲೀಸರು 50 ಸಾವಿರ ರೂ. ಬಹುಮಾನವನ್ನೂ ಸಹ ಘೋಷಿಸಿದ್ದರು.

ಈ ಇಬ್ಬರು ಡಕಾಯಿತರು ನಿನ್ನೆ ಬೈಕ್‍ನಲ್ಲಿ ತೆರಳುತ್ತಿದ್ದ ಸುಳಿವು ಪಡೆದ ಪೊಲೀಸ್ ಅಧಿಕಾರಿಗಳು ಶರಣಾಗತರಾಗುವಂತೆ ಸೂಚಿಸಿದರೂ ಸಹ ನಿರ್ಲಕ್ಷಿಸಿ ತಪ್ಪಿಸಿಕೊಳ್ಳಲೆತ್ನಿಸಿದ್ದಾರೆ. ಇದರಿಂದ ಪೊಲೀಸರು ಈ ಇಬ್ಬರನ್ನು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಗಾಯಗೊಂಡ ಡಕಾಯಿತನಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರಲ್ಲಿದ್ದ ಗುಂಡು, ಪಿಸ್ತೂಲು ಇವುಗಳನ್ನು ವಶಪಡಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Theft Delhi Arrested Police case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ