ಕಾಂಗ್ರೆಸ್ ನ ಎಲ್ಲ ಶಾಸಕರೂ ನನಗೆ ಆಪ್ತರು: ಸಿದ್ದರಾಮಯ್ಯ

Siddaramaiah Statement

11-07-2019

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ 16 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಹಾಗೆ ರಾಜೀನಾಮೆ ನೀಡಿದ ಅತೃಪ್ತ ಕಾಂಗ್ರೆಸ್ ಶಾಸಕರಲ್ಲಿ ಬಹಳಷ್ಟು ಮಂದಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರು. ಈ ವಿಚಾರವೇ ಇದೀಗ ಭಾರೀ ಚರ್ಚೆಯಾಗುತ್ತಿದೆ.

ಈ ಮಧ್ಯೆ ಈ ಊಹಾಪೋಹಗಳಿಗೆಲ್ಲ ಸಿದ್ದರಾಮಯ್ಯ ತೆರೆ ಎಳೆದಿದ್ದು, ರಾಜೀನಾಮೆ ನೀಡಿರುವ ಶಾಸಕರು ಮಾತ್ರವಲ್ಲ, ಕಾಂಗ್ರೆಸ್ ನ ಎಲ್ಲ 78 ಶಾಸಕರೂ ನನಗೆ ಆಪ್ತರಾಗಿದ್ದಾರೆ. ಅವರೆಲ್ಲ ನಮ್ಮ ಪಕ್ಷದ ಇತರ ನಾಯಕರಿಗೂ ಆಪ್ತರಾಗಿದ್ದಾರೆ. ಮಾಧ್ಯಮಗಳು ಸೆಲೆಕ್ಟಿವ್ ಆಗಿ ಈ ಶಾಸಕರನ್ನು ನನ್ನ ಆಪ್ತರು ಎಂದು ಹೇಳುತ್ತಿರುವುದು ಸರಿಯಲ್ಲ. ಇದರಿಂದ ನನ್ನ ಮನಸ್ಸಗೆ ನೋವಾಗಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Tweet Congress Siddaramaiah MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ