ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

Suicide

10-07-2019

ಬೆಂಗಳೂರು: ಯಲಹಂಕ ಉಪನಗರದ ಅಟ್ಟೂರಿನಲ್ಲಿ ನಿನ್ನೆ ರಾತ್ರಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ತನ್ನ 9 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆಮಾಡಿ ತಾನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ  ನಡೆದಿದೆ.

ಮಧುರೈ ಮೂಲದ ಪ್ರಿಯಾ (36), ತನ್ನ ಮಗಳು ಪ್ರತಿಕ್ಷಾಗೆ ಉಸಿರುಗಟ್ಟಿಸಿ ಕೊಲೆಮಾಡಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕೃತ್ಯವು ಅನುಮಾನಾಸ್ಪದವಾಗಿರುವುದರಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

ಎಲ್ ಅಂಡ್ ಟಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸುರೇಶ್ ಬಾಬು ಅವರನ್ನು ವಿವಾಹವಾಗಿದ್ದ ಪ್ರಿಯಾಗೆ ಪ್ರತಿಕ್ಷಾ ಅಲ್ಲದೆ, 16 ವರ್ಷದ ಆಕಾಶ್ ಎಂಬ ಇನ್ನೊಬ್ಬ ಮಗನಿದ್ದಾನೆ. ಅಟ್ಟೂರಿನ ಅಕ್ಷಯನಗರದಲ್ಲಿ ವಾಸಿಸುತ್ತಿದ್ದ ಪ್ರಿಯಾ, ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, 11ನೇ ತರಗತಿ ಓದುತ್ತಿದ್ದ ಮಗ ಆಕಾಶ್ ರಾತ್ರಿ 8ರ ವೇಳೆ ಸ್ಕೂಲ್ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ.

ಮನೆಯ ಮುಂಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದು, ಎಷ್ಟು ಬಾರಿ ಬಡಿದರೂ ಬಾಗಿಲು ತೆಗೆಯದ ಕಾರಣ, ಕೆಲಸಕ್ಕೆ ಹೋಗಿದ್ದ ತಂದೆಗೆ ಮೊಬೈಲ್ ಕರೆಮಾಡಿ ತಿಳಿಸಿದ್ದಾನೆ. ತಂದೆ ಸುರೇಶ್ ಬಾಬು ಬಂದು ಬಾಗಿಲು ಮುರಿದು ಒಳಹೋಗಿ ನೋಡಿದಾಗ ಇಬ್ಬರು ಮೃತಪಟ್ಟಿರುವುದು ಕಂಡುಬಂದಿದೆ.

ಕೂಡಲೇ ಯಲಹಂಕ ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Suicide Mother Daughter Yelahanka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ