ನಾವು ದರೋಡೆ ಮಾಡಲು ಬಂದಿಲ್ಲ:ಶಿವಲಿಂಗೇಗೌಡ

Political High drama infront of Mumbai hotel

10-07-2019

ಬೆಂಗಳೂರು: ಮುಂಬೈನ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರನ್ನು ಕರೆತರುತ್ತೇವೆಂದು ಅಲ್ಲಿಗೆ ಹೋಗಿರುವ ಜೆಡಿಎಸ್ ಶಾಸಕ ಶಿವಲಿಂಗೇಗೌಡರಿಗೆ ಹೋಟೆಲ್ ಪ್ರವೇಶಿಸಲು ನಿರಾಕರಿಸಲಾಗಿದೆ. ಮಹಾರಾಷ್ಟ್ರ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ಇಂತಹ ಕ್ರಮ ಕೈಗೊಂಡಿದ್ದಾರೆಂದು ಆರೋಪಿಸಿರುವ ಶಿವಲಿಂಗೇಗೌಡ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ. ನಾವು ಇಲ್ಲಿ ದರೋಡೆ ಅಥವಾ ಕಿಡ್ನಾಪ್ ಮಾಡೋಕೆ ಬಂದಿಲ್ಲ. ಇದು ಬಿಜೆಪಿ ಹೋಟೆಲಾ, ಸಾರ್ವಜನಿಕರಿಗೆ ಬರಬೇಡಿ ಎಂದು ತಡೆಯುವುದು ತಪ್ಪು ಎಂದು ಶಾಸಕ ಶಿವಲಿಂಗೇಗೌಡ ಗರಂ ಆಗಿದ್ದಾರೆ.

ಮುಂಬೈ ಹೋಟೆಲ್ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಲಿಂಗೇಗೌಡ, ನಾವು ಬಂದಿರುವುದು ನಮ್ಮ ಶಾಸಕರನ್ನು ಭೇಟಿ ಮಾಡಲು. ಬಿಜೆಪಿಯವರು ನಮ್ಮ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆ. ಈ ಬಗ್ಗೆ ನಮ್ಮ ಶಾಸಕರು ನಮಗೆ ಮಾಹಿತಿ ತಿಳಿಸಿದ್ದಾರೆ. ಹೀಗಾಗಿ ಬಂದಿದ್ದೇವೆ ಎಂದರು

ಇದು ಖಾಸಗಿ ಹೋಟೆಲ್, ಜೆಡಿಎಸ್ ಎಂಎಲ್‍ಎ ಬರಬೇಡಿ, ಆ ಎಂಎಲ್‍ಎ ಬರಬೇಡಿ ಎಂದರೆ ಹೇಗೆ. ಅವರು ಈ ಹೋಟೆಲ್‍ಗೆ ಕಸ್ಟಮರ್ಸ್, ಅವರ ಪಾಡಿಗೆ ಅವರು ಇದ್ದಾರೆ. ಯಾರನ್ನಾದರೂ ಬಲವಂತವಾಗಿ ಕಿಡ್ನಾಪ್ ಮಾಡಿದರೆ ಮಾತ್ರ ಪೊಲೀಸ್ ಅವರು ಎಂಟ್ರಿ ಆಗಬೇಕು. ಆದರೆ ಈ ರೀತಿ ಹೋಟೆಲ್‍ಗೆ ಹೋಗದಂತೆ ತಡೆಯುವುದು ತಪ್ಪು ಎಂದು ಶಿವಲಿಂಗೇಗೌಡ ಆಕ್ರೊಶ ವ್ಯಕ್ತಪಡಿಸಿದರು.

 


ಸಂಬಂಧಿತ ಟ್ಯಾಗ್ಗಳು

Shivalinge gowda MLA Mumbai Karnataka crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ